ಅಮರನಾಥ ಗುಹಾ ದೇವಾಲಯಕ್ಕೆ ಐದನೇ ಬ್ಯಾಚಿನಲ್ಲಿ ತೆರಳಿದ 5, 522 ಯಾತ್ರಿಕರು

ದಕ್ಷಿಣ ಕಾಶ್ಮೀರದ ಹಿಮಾಲಯದ ಸುಮಾರು 3880 ಮೀಟರ್ ಎತ್ತರದಲ್ಲಿರುವ ಪುಣ್ಯ ಕ್ಷೇತ್ರ ಅಮರನಾಥ ದೇವಾಲಯಕ್ಕೆ ಇಂದು ಅತಿ ಹೆಚ್ಚು 5522 ಯಾತ್ರಿಕರನ್ನೊಳಗೊಂಡ ಐದನೇ ತಂಡ ಪ್ರಯಾಣ ಬೆಳೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು- ಕಾಶ್ನೀರ:  ದಕ್ಷಿಣ ಕಾಶ್ಮೀರದ ಹಿಮಾಲಯದ ಸುಮಾರು 3880 ಮೀಟರ್ ಎತ್ತರದಲ್ಲಿರುವ ಪುಣ್ಯ ಕ್ಷೇತ್ರ ಅಮರನಾಥ ದೇವಾಲಯಕ್ಕೆ  ಇಂದು ಅತಿ ಹೆಚ್ಚು 5522 ಯಾತ್ರಿಕರನ್ನೊಳಗೊಂಡ  ಐದನೇ ತಂಡ  ಪ್ರಯಾಣ ಬೆಳೆಸಿದೆ.
ಇಂದು ಮಧ್ಯಾಹ್ನದವರೆದೂ 35 ಸಾವಿರಕ್ಕೂ ಹೆಚ್ಚು ಯಾತ್ರಿಕರು ದೇವಾಲಯಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 46 ದಿನಗಳ ಕಾಲದ ಯಾತ್ರೆಗಾಗಿ ದೇಶಾದ್ಯಂತ ಸುಮಾರು ಒಂದೂವರೆ ಲಕ್ಷ ಜನರು ನೋಂದಾಯಿಸಿಕೊಂಡಿದ್ದಾರೆ. ಅನಂತ್ ನಾಗ್ ಜಿಲ್ಲೆಯ ಪಾಲ್ಗಾಮ್ ಹಾಗೂ ಗಂದೇರ್ಬಲ್ ಜಿಲ್ಲೆಯ ಬಲ್ಟಾಲ್ ಮಾರ್ಗದ ಮೂಲಕ ದೇವಾಲಯಕ್ಕೆ ಪ್ರಯಾಣಿಕರು ತೆರಳುತ್ತಿದ್ದಾರೆ.
5, 522  ಯಾತ್ರಿಕರನ್ನೊಳಗೊಂಡ ಐದನೇ ಬ್ಯಾಚಿನಲ್ಲಿ 4, 456 ಪುರುಷರು ಹಾಗೂ 871 ಮಹಿಳೆಯರು, 31 ಮಕ್ಕಳು ಹಾಗೂ 164 ಸ್ವಾಮೀಜಿಗಳಿದ್ದಾರೆ. ಭಗವತಿ ನಗರ ಬೇಸ್ ಕ್ಯಾಂಪ್ ನಿಂದ ಇಂದು ಬೆಳಗ್ಗೆ 3-30 ರ ಸುಮಾರಿನಲ್ಲಿ ಪಾಲ್ಗಾಮ್ ಹಾಗೂ ಬಲ್ಟಾಲ್ ಮಾರ್ಗದಲ್ಲಿ 235 ವಾಹನಗಳ ಮೂಲಕ ಯಾತ್ರಾರ್ಥಿಗಳು ಅಮರನಾಥ ಗುಹ ದೇವಾಲಯಕ್ಕೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲ್ಗಾಮ್ ಮಾರ್ಗದ ಮೂಲಕ 2, 501ಕ್ಕೂ ಹೆಚ್ಚು ಯಾತ್ರಿಕರು 106  ಬಸ್ ಹಾಗೂ ಲಘು ಮೋಟಾರ್ ವಾಹನಗಳಲ್ಲಿ ತೆರಳಿದರೆ  ಬಾಲ್ಟಾಲ್ ಮಾರ್ಗದ ಮೂಲಕ 2520 ಯಾತ್ರಿಕರು 129 ಬಸ್ ಗಳು ಹಾಗೂ ಲಘು ವಾಹನಗಳಲ್ಲಿ ತೆರಳಿದ್ದಾರೆ. ಕೇಂದ್ರಿಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com