3 ಮಕ್ಕಳನ್ನು ಹೊಂದಿದ್ದಕ್ಕೆ ಹೈದರಾಬಾದ್ ಕಾರ್ಪೋರೇಟರ್ ನ್ನು ಅನರ್ಹಗೊಳಿಸಿದ ಕೋರ್ಟ್

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್ ಎಂಸಿ)ಯ ಕಾರ್ಪೋರೇಟರ್ ಒಬ್ಬರನ್ನು ನಾಂಪಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್ ಎಂಸಿ)ಯ ಕಾರ್ಪೋರೇಟರ್ ಒಬ್ಬರನ್ನು ನಾಂಪಲ್ಲಿ ಕೋರ್ಟ್ ಅನರ್ಹಗೊಳಿಸಿ ಗುರುವಾರ ತೀರ್ಪು ನೀಡಿದೆ.
ಜಿಎಚ್ ಎಂಸಿ ಕಾಯ್ದೆ 2009ರ ಸೆಕ್ಷನ್ 21 ಬಿ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.
ಟಿಆರ್ ಎಸ್ ಗೆ ಸೇರಿದ ಕಾಚೆಗುಡ ಕಾರ್ಪೋರೇಟರ್ ಎಕ್ಕಲ ಚೈತನ್ಯ ಕಣ್ಣ ಅವರು ಚುನಾವಣೆಗೆ ಸ್ಪರ್ಧಿಸುವ ವೇಳೆ ತಾವು ಕೇವಲು ಎರಡು ಮಕ್ಕಳನ್ನು ಹೊಂದಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದರು. ಆದರೆ ಕಣ್ಣ ಅವರು ಎರಡರಲ್ಲ ಮೂರು ಮಕ್ಕಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ, ಮಾಜಿ ಕಾರ್ಪೋರೇಟರ್ ಕೆ ರಮೇಶ್ ಯಾದವ್ ಅವರು ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು.
ಟಿಆರ್ ಎಸ್ ಕಾರ್ಪೋರೇಟರ್ ಅವರು ಅಫಿಡವಿಟ್ ನಲ್ಲಿ ಸುಳ್ಳು ಹೇಳಿದ್ದರಿಂದ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಸುಮಾರು ಮೂರು ವರ್ಷಗಳ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ ಕಣ್ಣ ಅವರನ್ನು ಅನರ್ಹಗೊಳಿಸಿದೆ ಎಂದು ಯಾದವ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com