ಆಧಾರ್ ಸುಗ್ರೀವಾಜ್ಞೆಯ ವಿರುದ್ಧ ಮನವಿ ಆಲಿಸಿದ ಸುಪ್ರೀಂನಿಂದ ಯುಐಡಿಎಐಗೆ ನೋಟೀಸ್

ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಸುಗ್ರೀವಾಜ್ಞೆ 2019 ಯಲ್ಲಿರುವ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮನವಿಯನ್ನು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಸುಗ್ರೀವಾಜ್ಞೆ 2019 ಯಲ್ಲಿರುವ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮನವಿಯನ್ನು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ (ಯುಐಡಿಎಐ) ನೋಟಿಸ್ ಜಾರಿಗೊಳಿಸಿದ್ದು ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಸುಗ್ರೀವಾಜ್ಞೆ 2019 ನಿಬಂಧನೆಗಳನ್ನು ಪ್ರಶ್ನಿಸಿದೆ.
ಅರ್ಜಿದಾರರು ಸುಗ್ರೀವಾಜ್ಞೆ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಿದ್ದಾರೆ.
ಸುಗ್ರೀವಾಜ್ಞೆಯು ಖಾಸಗಿ ಪಕ್ಷ ಅಥವಾ ಮೂರನೇ ವ್ಯಕ್ತಿಗೆ ಆಧಾರ್ ಮಾಹಿತಿ ಪಡೆಯಲು ಅನುಮತಿ ನೀಡಲು ಹಿಂಬಾಗಿಲನ್ನು ಸೃಷ್ಟಿಸುತ್ತದೆ, ಇದರಿಂದಾಗಿ ಖಾಸಗಿ ಮಾಹಿತಿಗಳು ಬೇರೆಯವರಿಗೆ ಸುಲಬದಲ್ಲಿ ದಿರಕಿ ಅದು ವಂಚನೆ, ಶೋಷಣೆ ನಡೆಸಲು ಅನುಕೂಲವಾಗಲಿದೆ" ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com