ಮಾನಹಾನಿ ಪ್ರಕರಣ: ಪಾಟ್ನಾ ನ್ಯಾಯಲಯದಿಂದ ರಾಹುಲ್ ಗಾಂಧಿಗೆ ಜಾಮೀನು

ಕಳ್ಳರ ಹೆಸರಿನ ಮುಂದೆ 'ಮೋದಿ ಹೇಳಿಕೆ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೂಡಿದ್ದ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜಾಮೀನು ದೊರಕಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಪಾಟ್ನಾ: ಕಳ್ಳರ ಹೆಸರಿನ ಮುಂದೆ 'ಮೋದಿ ಹೇಳಿಕೆ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೂಡಿದ್ದ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜಾಮೀನು ದೊರಕಿದೆ.
ಶನಿವಾರ ಪಾಟ್ನಾ  ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿಗೆ ಇಲ್ಲಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
'ಎಲ್ಲ ಕಳ್ಳರ ಹೆಸರಿನ ಮುಂದೆ ಮೋದಿ ಎಂದಿರುವುದೇಕೆ ಎಂದು ಗಾಂಧಿ ಹೇಳಿಕೆಗೆ ಬಿಜೆಪಿಯ ಹಿರಿಯ ಮುಖಂಡ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ರ್ಯಾ;ಇಯ ವೇಳೆ ರಾಹುಲ್ ಎಲ್ಲಾ ಕಳ್ಳರ, ವಂಚಕರ ಹೆಸರಲ್ಲಿ ಮೋದಿ ಎಂದು ಪದವಿರುತ್ತದೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ, ಪಿಎನ್ಬಿ ವಂಚಕ ನೀರವ್ ಮೋದಿ, ಐಪಿಎಲ್ ಮಾಜಿ ಆಯುಕ್ತ ಲಲತ್ ಮೋದಿ ಹೆಸರನ್ನು ಉಲ್ಲೇಖಿಸಿ ಗಾಂಧಿ ಈ ಆರೋಪ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com