ಮಾತನಾಡುವ ಆಸೆ ಇದ್ದರೆ ಹೊರಗೆ ಹೋಗಿ, ಸದನದಲ್ಲಿ ಕೂರಬೇಡಿ: ಸಂಸದರಿಗೆ ಸ್ಪೀಕರ್ ಆದೇಶ

ನೂತನ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸಂಸದರ ಜೊತೆ ಶಿಸ್ತುಬದ್ಧವಾಗಿದ್ದಾರೆ ಎಂದು ಕಾಣುತ್ತದೆ...
ಲೋಕಸಭಾಧ್ಯಕ್ಷ ಓಂ ಬಿರ್ಲಾ
ಲೋಕಸಭಾಧ್ಯಕ್ಷ ಓಂ ಬಿರ್ಲಾ
ನವದೆಹಲಿ: ನೂತನ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸಂಸದರ ಜೊತೆ ಶಿಸ್ತುಬದ್ಧವಾಗಿದ್ದಾರೆ ಎಂದು ಕಾಣುತ್ತದೆ. ಸದನದಲ್ಲಿ ಕಲಾಪ ನಡೆಯುತ್ತಿರುವಾಗ ಸದಸ್ಯರು ಮಾತನಾಡಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. 
ಕಳೆದ ಬಾರಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ಅವರಿಗೆ ಸ್ಪೀಕರ್ ಕೆಲಸ ಮಾಡದಂತೆ ಸಲಹೆ ನೀಡಿದ್ದರು.
ಕೆಲವು ಸದಸ್ಯರು ಸದನದೊಳಗೆ ಕಲಾಪ ನಡೆಯುತ್ತಿರುವಾಗ ಮಾತನಾಡುವುದನ್ನು ನಾನು ಕಂಡಿದ್ದೇನೆ. ಇದು ನಿಮ್ಮ ಸದನ. ಸದನ ಹಾಗೆಯೇ ನಿಮ್ಮೆಚ್ಛೆಯಂತೆ ನಡೆಯಬೇಕೆಂದರೆ ನಾನು ಬಿಟ್ಟುಬಿಡುತ್ತೇನೆ, ಆದರೆ ಅದು ಸರಿಯಾದ ಕ್ರಮವೇ ಎಂದು ಬಿರ್ಲಾ ಸಂಸದರಲ್ಲಿ ಪ್ರಶ್ನಿಸಿದರು.
ಸದನದೊಳಗೆ ಕುಳಿತಿರುವಾಗ ಅಥವಾ ನಿಂತಿರುವಾಗ ಮಾತನಾಡಿದರೆ ನಾನು ಸಹಿಸುವುದಿಲ್ಲ. ಇಲ್ಲಿಂದ ಗ್ಯಾಲರಿ ಕೇವಲ ಎರಡು ಹೆಜ್ಜೆ ಮುಂದಿದೆ. ಅಲ್ಲಿ ಹೋಗಿ ಕುಳಿತುಕೊಂಡು ಮಾತನಾಡಿ ಎಂದು ಕಟ್ಟುನಿಟ್ಟಿನ ಸಂದೇಶ ರವಾನಿಸಿದರು ಸ್ಪೀಕರ್ ಬಿರ್ಲಾ.
ಸಭಾಧ್ಯಕ್ಷರ ಮಾತಿಗೆ ನೂತನ ಸಂಸದ ತಲೆದೂಗಿದರು. ನೀವು ಶಿಸ್ತುಬದ್ಧವಾಗಿರಿ ಸರ್ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಹೇಳಿದರು. 
ಕಲಾಪ ನಡೆಯುವಾಗ ಮಾತನಾಡುವುದು, ಹರಟೆ ಹೊಡೆಯುವ ಚಾಳಿ ಸಂಸದರಿಗೆ ಅಷ್ಟು ಸುಲಭವಾಗಿ ಬಿಟ್ಟು ಹೋಗಲಿಕ್ಕಿಲ್ಲ ಎಂದು ಬಂಡೋಪಾಧ್ಯಾಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com