ಗೋವಾ: ಪರಿಕ್ಕರ್ ರಾಜಕೀಯ ಪರಂಪರೆಯೂ ಸತ್ತಿದೆ- ನಿರ್ಗಮಿತ ಉಪಮುಖ್ಯಮಂತ್ರಿ

ಕಾಂಗ್ರೆಸ್ ಪಕ್ಷದ 10 ಶಾಸಕರು ಬಿಜೆಪಿ ಸೇರ್ಪಡೆಯಿಂದಾಗಿ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ರಾಜಕೀಯ ಪರಂಪರೆಯೂ ಸತ್ತಿದೆ ಎಂದು ನಿರ್ಗಮಿತ ಉಪಮುಖ್ಯಮಂತ್ರಿ ವಿಜಯ್ ಸರ್ ದೇಸಾಯಿ ಕಿಡಿಕಾರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗೋವಾ: ಕಾಂಗ್ರೆಸ್ ಪಕ್ಷದ 10 ಶಾಸಕರು ಬಿಜೆಪಿ ಸೇರ್ಪಡೆಯಿಂದಾಗಿ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ರಾಜಕೀಯ ಪರಂಪರೆಯೂ ಸತ್ತಿದೆ ಎಂದು ನಿರ್ಗಮಿತ ಉಪಮುಖ್ಯಮಂತ್ರಿ ವಿಜಯ್ ಸರ್ ದೇಸಾಯಿ ಕಿಡಿಕಾರಿದ್ದಾರೆ. 
ಬಿಜೆಪಿಯ ಹಿರಿಯ ನಾಯಕರಾಗಿದ್ದ ವಿಜಯ್ ಸರ್ ದೇಸಾಯಿ  2017ರಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.
ಗೋವಾ ಕಾಂಗ್ರೆಸ್ ನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ 10 ಶಾಸಕರ ಪೈಕಿ ಮೂವರನ್ನು  ಸಿಎಂ ಪ್ರಮೋದ್ ಸಾವಂತ್ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಹಾಗೆಯೇ  ಸರ್ ದೇಸಾಯಿ ಸೇರಿದಂತೆ ಗೋವಾ ಫಾರ್ವಡ್ ಪಕ್ಷದ ಮೂವರು ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿಯನ್ನು ಸಂಪುಟದಿಂದ ಕೈ ಬಿಟಿದ್ದಾರೆ.
ಮಾರ್ಚ್ 17 ರಂದು  ಪರಿಕ್ಕರ್  ದೈಹಿಕವಾಗಿ ಮರಣ ಹೊಂದಿದ್ದರು. ಆದರೆ, ಇಂದು ಅವರ ರಾಜಕೀಯ ಪರಂಪರೆಯೂ ಸತ್ತಿದೆ ಎಂದು ಮಿರಾಮರ್ ಬಳಿಯ ಪರಿಕ್ಕರ್ ಸ್ಮಾರಕ ಬಳಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಮಧ್ಯೆ  ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಗೋವಾ ಫಾರ್ವಡ್ ಪಕ್ಷ ಹಿಂತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಬಲ ನೀಡುವುದಾಗಿ ಪರಿಕ್ಕರ್ ಅವರಿಗೆ ಮಾತು ಕೊಟ್ಟಿದ್ದ ಹಿನ್ನೆಲೆಯಲ್ಲಿ ಪ್ರಮೋದ್ ಸಾವಂತ್ ಅವರ ಸರ್ಕಾರಕ್ಕೆ ಬೆಂಬಲ ನೀಡಿದ್ದೇವು. ಆದರೆ, ಈಗ ಮೋಸ ಹೋಗಿದಂತಾಗಿದೆ. ಕೇಂದ್ರದ ಬಿಜೆಪಿ ವರಿಷ್ಠರಿಂದ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ಮೈತ್ರಿ ಪಕ್ಷಗಳಿಗೆ ಎನ್ ಡಿಎಯಲ್ಲಿ ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com