ಸಂಸ್ಕೃತ ಭಾರತ ದೇಶವನ್ನು ಒಗ್ಗೂಡಿಸಿ ಅಭಿವೃದ್ಧಿಪಡಿಸುತ್ತದೆ: ಸಂಸ್ಕೃತ ಭಾರತಿ

ಸಂಸ್ಕೃತ ಭಾರತವನ್ನು ಏಕೀಕರಣ ಮಾಡುವ ಭಾಷೆಯಾಗಿದ್ದು ದೇಶಾದ್ಯಂತ ಎಲ್ಲಾ ಹಂತಗಳಲ್ಲಿ ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಸಂಸ್ಕೃತ ಭಾರತವನ್ನು ಏಕೀಕರಣ ಮಾಡುವ ಭಾಷೆಯಾಗಿದ್ದು ದೇಶಾದ್ಯಂತ ಎಲ್ಲಾ ಹಂತಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದನ್ನು ಅಭಿವೃದ್ಧಿಪಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲಿತ ಸಂಸ್ಕೃತ ಭಾರತಿ ಒತ್ತಾಯಿಸಿದೆ. 
ಕೇಂದ್ರ ಸಚಿವರಾದ ಹರ್ಷವರ್ಧನ, ಪ್ರತಾಪ್ ಸಾರಂಗಿ, ಅಶ್ವಿನಿ ಚೌಬೆ, ಶ್ರೀಪಾದ್ ಯೆಸ್ಸೊ ನಾಯಕ್ ಸೇರಿದಂತೆ ಲೋಕಸಭೆಯ ನೂತನ 47 ಸಂಸದರನ್ನು ಸಂಸ್ಕೃತ ಭಾರತಿ  ಸನ್ಮಾನಿಸಿದೆ. ಇವರೆಲ್ಲ ಸಂಸ್ಕೃತ ಭಾಷೆಯಲ್ಲಿಯೇ  ಈ ಬಾರಿ ಪ್ರಮಾಣವಚನ ಸ್ವೀಕರಿಸಿದ್ದರು.
ಭಾರತದ ಪುರಾತನ ಭಾಷೆಯಾದ ಸಂಸ್ಕೃತವನ್ನು ಸದನದ ಸದಸ್ಯರಿಗೆ ಪರಿಚಯಿಸಲು ತರಬೇತಿ ನೀಡಲು ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ಸಂಸ್ಕೃತ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಆರ್ ಎಸ್ಎಸ್ ನಾಯಕ ದಿನೇಶ್ ಕಾಮತ್ ಹೇಳಿದ್ದಾರೆ.
ಸಂಸ್ಕೃತ ಭಾಷೆಯನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಮಾಡಬೇಕೆಂದು ಡಾ ಬಿ ಆರ್ ಅಂಬೇಡ್ಕರ್ ಹೇಳಿದ್ದರು. ಸಂಸ್ಕೃತ ಎಂಬುದು ಕೇವಲ ಬ್ರಾಹ್ಮಣರ ಭಾಷೆಯಲ್ಲ. ವ್ಯಾಸ, ವಾಲ್ಮೀಕಿ, ಕಾಳಿದಾಸ ಅವರೆಲ್ಲ ಸಂಸ್ಕೃತದಲ್ಲಿ ಪಂಡಿತರಾಗಿದ್ದರು. ಆದರೆ ಅವರು ಬ್ರಾಹ್ಮಣರಲ್ಲ. ಮಾನವ ಜನಾಂಗವನ್ನು ಸಂಸ್ಕೃತ ಭಾಷೆ ವಿಕಸಿಸುತ್ತದೆ, ಭಾರತ ದೇಶವನ್ನು ಒಗ್ಗೂಡಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com