ನಾನು ರಾಜಕೀಯದಲ್ಲಿರಬೇಕೆಂದು ನೆಲ್ಸನ್ ಅಂಕಲ್ ಹೇಳಿದ್ದರು- ಪ್ರಿಯಾಂಕಾ

ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡಲೇ ಅವರೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಿಯಾಗಿರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

Published: 18th July 2019 12:00 PM  |   Last Updated: 18th July 2019 04:36 AM   |  A+A-


Priyanka Gandhi wadra

ಪ್ರಿಯಾಂಕಾ ಗಾಂಧಿ ವಾದ್ರಾ

Posted By : ABN ABN
Source : The New Indian Express
ನವದೆಹಲಿ:ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡಲೇ ಅವರೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಿಯಾಗಿರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಆಫ್ರಿಕಾದ ಗಾಂಧಿ ಎಂದೇ ಕರೆಯಲ್ಪಡುವ ನೆಲ್ಸನ್ ಮಂಡೇಲಾರ 101ನೇ ಜಯಂತಿಯಂದು ಪ್ರಿಯಾಂಕಾ ಗಾಂಧಿ ನೆಲ್ಸನ್ ಮಂಡೇಲಾ ಜೊತೆಗಿರುವ ಪೋಟೋವೊಂದನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ.

ಇಡೀ ಜಗತ್ತು ನೆಲ್ಸನ್ ಮಂಡೇಲಾ ಅವರಂತಹ ವ್ಯಕ್ತಿಗಳನ್ನು ಕಳೆದುಕೊಂಡಿದೆ. ಅವರ ಜೀವನವು ಸತ್ಯ, ಪ್ರೀತಿ ಮತ್ತು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ನನಗೆ ಅವರು ನೆಲ್ಸನ್ ಅಂಕಲ್ (ನಾನು ರಾಜಕೀಯದಲ್ಲಿರಬೇಕೆಂದು ಅವರೊಮ್ಮೆ ನನಗೆ ಹೇಳಿದ್ದರು. ಅವರು ಯಾವಾಗಲೂ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿರುತ್ತಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.


ಜನವರಿ ತಿಂಗಳಲ್ಲಿ ಉತ್ತರ ಪ್ರದೇಶ ಪೂರ್ವ  ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಪ್ರಿಯಾಂಕಾ ಗಾಂಧಿ ಈ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp