ಮರಿ ಜಿಂಕೆಗೆ ಹಾಲುಣಿಸಿದ ಮಹಿಳೆ, ಮಾತೃ ವಾತ್ಸಲ್ಯಕ್ಕೆ ಪ್ರಶಂಸೆಯ ಮಹಾಪೂರ

ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ....
ಮರಿ ಜಿಂಕೆಗೆ ಹಾಲುಣಿಸುತ್ತಿರುವ ಮಹಿಳೆ
ಮರಿ ಜಿಂಕೆಗೆ ಹಾಲುಣಿಸುತ್ತಿರುವ ಮಹಿಳೆ
ಜೋಧ್ ಪುರ್: ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಬಿಷ್ಣೋಯಿ ಸಮುದಾಯದ ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಸಾಮಾಜಿ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ಜೋಧ್​ಪುರದ ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಮರಿ ಜಿಂಕೆಗೆ ಹಾಲುಣಿಸುತ್ತಿರುವ ಶೇರ್ ಮಾಡಿದ್ದು, ಈಗ ಆ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.
ಬಿಷ್ಣೋಯಿ ಸಮುದಾಯದ ಮಹಿಳೆಯರು ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಸಹೃದಯವುಳ್ಳಂತವರು. ಅವರು ತಮ್ಮ ಮಕ್ಕಳಂತೆ ಪ್ರಾಣಿ ಹಾಗೂ ಪಕ್ಷಿಗಳನ್ನು ಪೋಷಣೆ ಮಾಡುತ್ತಾರೆ ಎಂದು ಕಾಸ್ವಾನ್ ಅವರು ಬರೆದುಕೊಂಡಿದ್ದಾರೆ.
ಈ ಫೋಟೋವನ್ನು ಸಾವಿರಾರು ಜನ ಶೇರ್​ ಮಾಡಿದ್ದುು,  ಅವರೊಬ್ಬರು ಜಗತ್ತಿನ ಶ್ರೇಷ್ಠ ತಾಯಿ. ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com