ಹನುಮಾನ್ ಚಾಲೀಸ್ ವಾಚಿಸಿದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ, ಮನೆ ಬಿಡುವಂತೆ ಒತ್ತಡ!

ಹಿಜಾಬ್ ಧರಿಸಿ ಹನುಮಾನ್ ಚಾಲೀಸ್ ವಾಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ ಹಾಗೂ ತಕ್ಷಣ ಮನೆ ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮಹಿಳೆಯೊಬ್ಬರು...
ಇಶ್ರಾತ್ ಜಹಾನ್
ಇಶ್ರಾತ್ ಜಹಾನ್
ಕೋಲ್ಕತ್ತಾ: ಹಿಜಾಬ್ ಧರಿಸಿ ಹನುಮಾನ್ ಚಾಲೀಸ್ ವಾಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ ಹಾಗೂ ತಕ್ಷಣ ಮನೆ ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ತ್ರಿವಳಿ ತಲಾಕ್ ನಿಷೇಧ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವರ ಪೈಕಿ ಒಬ್ಬರಾಗಿರುವ ಬಿಜೆಪಿ ಸದಸ್ಯೆ ಇಶ್ರಾತ್ ಜಹಾನ್ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿದ್ದಾರೆ. 
ನನ್ನ ಭಾವ ಮತ್ತು ಮನೆ ಮಾಲೀಕ ಸೇರಿ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಜಹಾನ್ ಹೌರಾದ ಗೊಲಾಬರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com