'ರಾಜೀವ್ ಗಾಂಧಿ 2 ನೇ ಪ್ರಮುಖ ಕರ ಸೇವಕ'

ಬಾಬ್ರಿ ಮಸೀದಿಯನ್ನು ಉಳಿಸುವುದಕ್ಕೆ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಸರ್ಕಾರಕ್ಕೆ ಹಲವು ಅವಕಾಶಗಳಿದ್ದರೂ ಸಹ ಅದನ್ನು ಯಾರೊಬ್ಬರೂ ಬಳಸಿಕೊಳ್ಳಲಿಲ್ಲ ಎಂದು ಮಾಜಿ ಗೃಹ ಕಾರ್ಯದರ್ಶಿ
ನವದೆಹಲಿ: ಬಾಬ್ರಿ ಮಸೀದಿಯನ್ನು ಉಳಿಸುವುದಕ್ಕೆ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಸರ್ಕಾರಕ್ಕೆ ಹಲವು ಅವಕಾಶಗಳಿದ್ದರೂ ಸಹ ಅದನ್ನು ಯಾರೊಬ್ಬರೂ ಬಳಸಿಕೊಳ್ಳಲಿಲ್ಲ ಎಂದು ಮಾಜಿ ಗೃಹ ಕಾರ್ಯದರ್ಶಿ ಮಾಧವ್  ಗಾಡ್ಬೋಲ್ ಹೇಳಿದ್ದಾರೆ. 
ಮಾಧವ್ ಗಾಡ್ಬೋಲ್ ಅವರ The Babri Masjid Ram Mandir Dilemma: An Acid Test for India's Constitution ಪುಸ್ತಕ ಬಿಡುಗಡೆಗೆ ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ನೀಡಿರುವ ಸಂದರ್ಶನದಲ್ಲಿ ಗಾಡ್ಬೋಲ್ ಹಲವು ಸಂಗತಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. 
ಬಾಬ್ರಿ ಮಸೀದಿ ಧ್ವಂಸಗೊಂಡ ಅವಧಿಯಲ್ಲಿ ಗಾಡ್ಬೋಲ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀವ್ ಗಾಂಧಿ ನೇತೃತ್ವದ ಸರ್ಕಾರದಿಂದ ಹಿಡಿದು ಮುಂದೆ ಬಂದ ಯಾವುದೇ ಸರ್ಕಾರಗಳು ಸಹ ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಬಗ್ಗೆ ಗಮನ ಹರಿಸಿಲ್ಲ. 
ರಾಜೀವ್ ಗಾಂಧಿ, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಸರ್ಕಾರಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಹಲವಾರು ಸಲಹೆಗಳು ಬಂದಿದ್ದವು ಆದರೆ ಯಾವ ಸರ್ಕಾರವೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಅಚ್ಚರಿಯೆಂದರೆ ರಾಜೀವ್ ಗಾಂಧಿ ಸಹ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿಲ್ಲ. 
1949 ರ ಡಿ.22 ರಂದು ಬಾಬ್ರಿ ಮಸೀದಿಯಲ್ಲಿ ರಾಮನ ವಿಗ್ರಹ ಸ್ಥಾಪನೆಗೆ ಫೈಜಾಬಾದ್ ನ ಜಿಲ್ಲಾ ನ್ಯಾಯಾಧೀಶ ನಾಯರ್ ಉತ್ತೇಜಿಸಿದ್ದರು. ಈ ವ್ಯಕ್ತಿಯ ಬಳಿಕ ರಾಜೀವ್ ಗಾಂಧಿ 2 ನೇ ಪ್ರಮುಖ ಕರ ಸೇವಕ ಎಂಬುದನ್ನು ನಾನು ಯಾವುದೇ ಹಿಂಜರಿಕೆ ಇಲ್ಲದೇ ಹೇಳುತ್ತೇನೆ ಎಂದು ಮಾಧವ್  ಗಾಡ್ಬೋಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com