ಕಾಶ್ಮೀರವನ್ನು ಲೂಟಿ ಮಾಡಿದ ಭ್ರಷ್ಟರನ್ನು ಹತ್ಯೆ ಮಾಡಿ: ಉಗ್ರರಿಗೆ ರಾಜ್ಯಪಾಲ ಸತ್ಯಪಾಲ್ ಮಲೀಕ್ ಕರೆ

ಕಾಶ್ಮೀರವನ್ನು ಲೂಟಿ ಮಾಡಿದವರನ್ನು ಹತ್ಯೆ ಮಾಡಿ ಎಂದು ಭಯೋತ್ಪಾದಕರಿಗೆ ರಾಜ್ಯಪಾಲ ಸತ್ಯಪಾಲ್ ಮಲೀಕ್ ಕರೆ ನೀಡಿದ್ದಾರೆ.

Published: 22nd July 2019 12:00 PM  |   Last Updated: 22nd July 2019 12:29 PM   |  A+A-


Satya Pal Malik

ಸತ್ಯಪಾಲ್ ಮಲೀಕ್

Posted By : SBV SBV
Source : PTI
ಕಾರ್ಗಿಲ್: ಕಾಶ್ಮೀರವನ್ನು ಲೂಟಿ ಮಾಡಿದವರನ್ನು ಹತ್ಯೆ ಮಾಡಿ ಎಂದು ಭಯೋತ್ಪಾದಕರಿಗೆ ರಾಜ್ಯಪಾಲ ಸತ್ಯಪಾಲ್ ಮಲೀಕ್ ಕರೆ ನೀಡಿದ್ದಾರೆ. 

ಸತ್ಯಪಾಲ್ ಮಲೀಕ್ ಅವರ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.  ರಾಜ್ಯದಲ್ಲಿ ಭ್ರಷ್ಟಾಚಾರ ಅತಿ ದೊಡ್ಡ ರೋಗವಾಗಿದೆ. ಯಾವುದೇ ಕಾರಣವಿಲ್ಲದೇ ಯುವಕರು ಭದ್ರತಾ ಸಿಬ್ಬಂದಿಗಳನ್ನು, ಮುಗ್ಧರನ್ನು ಹತ್ಯೆ ಮಾಡುತ್ತಿದ್ದಾರೆ. ಅವರನ್ನೇಕೆ ಹತ್ಯೆ ಮಾಡುತ್ತೀರಿ? ಅದರ ಬದಲು ರಾಜ್ಯವನ್ನು ಲೂಟಿ ಮಾಡಿದ ಜನರನ್ನು ಹತ್ಯೆ ಮಾಡಿ, ಈ ವರೆಗೆ ಯಾರಾದರೂ ಅಂತಹ ಒಬ್ಬ ವ್ಯಕ್ತಿಯನ್ನು ಕೊಂದಿದ್ದೀರಾ? ಎಂದು ಸತ್ಯಪಾಲ್ ಮಲೀಕ್ ಹೇಳಿದ್ದಾರೆ. 

ಬಂದೂಕು ಎಂದಿಗೂ ಸಮಸ್ಯೆಗಳಿಗೆ ಪರಿಹಾರವಾಗಲಾರದು, ಯಾರೂ ಸಹ ಅದನ್ನು ಬಳಸಿ ಸರ್ಕಾರವನ್ನು ಬಗ್ಗಿಸುವುದಕ್ಕೆ ಸಾಧ್ಯವಿಲ್ಲ, ನಿಮ್ಮದು ನಿರರ್ಥಕ ಹೋರಾಟ, ನಿಮ್ಮ ಜೀವಗಳನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ  ಎಂದೂ ರಾಜ್ಯಪಾಲರು ಉಗ್ರರ ಕುರಿತು ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp