ಜಮ್ಮು-ಕಾಶ್ಮೀರ: ವಿವಾದಾತ್ಮಕ ಹೇಳಿಕೆ, ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಷಾದ

ಕಾಶ್ಮೀರದಲ್ಲಿ ಮುಗ್ದರ ಬದಲು ಲೂಟಿ ಹೊಡೆದ ಭ್ರಷ್ಟರನ್ನು ಕೊಲ್ಲುವಂತೆ ಉಗ್ರರಿಗೆ ಕರೆ ನೀಡಿದ್ದ ಹೇಳಿಕೆ ಬಗ್ಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲ ಸತ್ಯಪಾಲ್ ಮಲಿಕ್
ರಾಜ್ಯಪಾಲ ಸತ್ಯಪಾಲ್ ಮಲಿಕ್
ಶ್ರೀನಗರ: ಕಾಶ್ಮೀರದಲ್ಲಿ ಮುಗ್ದರ ಬದಲು ಲೂಟಿ ಹೊಡೆದ ಭ್ರಷ್ಟರನ್ನು ಕೊಲ್ಲುವಂತೆ ಉಗ್ರರಿಗೆ  ಕರೆ ನೀಡಿದ್ದ ಹೇಳಿಕೆ ಬಗ್ಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿದ ಭ್ರಷ್ಟಾಚಾರದ ಬಗ್ಗೆ ರೋಸಿ ಹೋಗಿ, ಅವಸರವಾಗಿ ಈ ಹೇಳಿಕೆ ನೀಡಿದ್ದಾಗಿ ರಾಜ್ಯಪಾಲರು ಸ್ಪಷ್ಪಪಡಿಸಿ ಈ ವಿಷಯಕ್ಕೆ ತೆರೆ ಎಳೆದಿದ್ದಾರೆ.
ದೆಹಲಿಯಲ್ಲಿ ನನ್ನ ಖ್ಯಾತಿಯ ಕಾರಣದಿಂದಾಗಿ ರಾಜ್ಯಪಾಲನಾಗಿದ್ದೆ. ನಾನು ರಾಜಕಾರಣಿಗಳ ಕುಟುಂಬದಿಂದ ಬಂದವನಲ್ಲ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ನ್ಯಾಷನಲ್ ಕಾನ್ಫೆರನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ಟ್ವೀಟ್ ಗೆ ಪ್ರತ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ರಾಜಕೀಯ ಬಾಲಪರಾಧಿ ಎಂದು ಟ್ವೀಟ್ ಮಾಡಿದ್ದಾರೆ. ಅದನ್ನು ನೋಡಿ ನೀವೆ ಅರ್ಥಮಾಡಿಕೊಳ್ಳಿ ಎಂದರು.
ರಾಜ್ಯಪಾಲರು ಎಂಬ ಕಾರಣಕ್ಕೆ ಅವರು ಇಂತಹ ಪ್ರತಿಕ್ರಿಯೆ ನೀಡಬಾರದು ಎಂದು ಒಮರ್ ಅವರು ಹೇಳಿದ್ದರು. ಇದು ವೈಯಕ್ತಿಕ ಹೇಳಿಕೆಯಾಗಿದ್ದು, ಇದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿ ರಾಜ್ಯಪಾಲರು ವಿಷಯಕ್ಕೆ ತೆರೆ ಎಳೆದಿದ್ದಾರೆ.
ಉಗ್ರರು ಅಮಾಯಕರನ್ನು ಏಕೆ ಕೊಲ್ಲುತ್ತಾರೆ ಇದರಿಂದ ಏನು ಗಳಿಸುವಿರಿ ? ನೀವು ಕೊಲ್ಲುವುದಾದರೆ ದೇಶ ಮತ್ತು ಕಾಶ್ಮೀರ ಲೂಟಿ ಮಾಡಿದ ಭ್ರಷ್ಟರನ್ನು ಏಕೆ ಕೊಲ್ಲಬಾರದು ಎಂದು ಭಾನುವಾರ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com