ಜಮ್ಮು- ಕಾಶ್ಮೀರ: ಕಳೆದ ಐದು ತಿಂಗಳಲ್ಲಿ 101 ಉಗ್ರರು ಹತ್ಯೆ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಕಳೆದ ಐದು ತಿಂಗಳಲ್ಲಿ 23 ವಿದೇಶಿಯರು ಸೇರಿದಂತೆ ಒಟ್ಟು 101 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಕಳೆದ ಐದು ತಿಂಗಳಲ್ಲಿ 23 ವಿದೇಶಿಯರು ಸೇರಿದಂತೆ ಒಟ್ಟು 101 ಉಗ್ರರನ್ನು ಹತ್ಯೆ ಮಾಡಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಉಗ್ರ ಗುಂಪಿಗೆ ಸೇರ್ಪಡೆಯಾಗುತ್ತಿರುವುದು ಭದ್ರತಾ ಪಡೆಯ  ಆತಂಕಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ ತಿಂಗಳಿನಿಂದ ಸುಮಾರು 50 ಯುವಕರು ವಿವಿಧ ಉಗ್ರ ಸಂಘಟನೆ ಸೇರಿದ್ದಾರೆ. ಈ  ಸಂಘಟನೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಯುವಕರಿಗೆ ಶಿಕ್ಷಣ ನೀಡುವಂತೆ  ಅವರ ಪಾಲಕರನ್ನು ಮನವೊಲಿಸುವಂತಹ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಝಾಕಿರ್ ಮೂಸಾ ಸೇರಿದಂತೆ ಮೇ 31ರವರೆಗೂ 23 ವಿದೇಶಿಗರು , 78 ಸ್ಥಳೀಯ ಉಗ್ರರು ಸೇರಿದಂತೆ ಒಟ್ಟು 101 ಉಗ್ರರು ಮೃತಪಟ್ಟಿದ್ದಾರೆ. ಮೇ 23 ರಂದು ಮೂಸಾನನ್ನು ಹತ್ಯೆ ಮಾಡಿದ ನಂತರ ಅನ್ಸಾರ್ ಗಜ್ ವಾತ್ ಹುಲ್ -ಹಿಂದ್ ಗುಂಪು ಹಿಜ್ಬುಲ್ ಮುಜಾಹಿದ್ದೀನ್ ಗುಂಪನ್ನು ಸೇರಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶೂಪಿಯಾನ್  ವಲಯದಲ್ಲಿ 16 ಸ್ಥಳೀಯ ಉಗ್ರರು ಸೇರಿದಂತೆ  25, ಅವಂತಿಪುರದಲ್ಲಿ 14, ಕುಲ್ಗಾಮ್ ನಲ್ಲಿ 12 ಸೇರಿದಂತೆ ಪುಲ್ವಾಮದಲ್ಲಿ 15 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com