ಪಂಜಾಬ್ : ಹೊಸ ಖಾತೆ ವಹಿಸಿಕೊಳ್ಳಲು ಸಿಧು ನಕಾರ, ವರಿಷ್ಠರ ಭೇಟಿಗೆ ದೆಹಲಿಗೆ ದೌಡು

ಇತ್ತೀಚಿಗೆ ನಡೆದ ಸಂಟುಪ ಪುನರ್ ರಚನೆ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಅವರಿಂದ ಸ್ಥಳೀಯ ಸರ್ಕಾರ ಇಲಾಖೆ ಖಾತೆ ಕಿತ್ತುಕೊಂಡಿದ್ದು, ಹೊಸದಾಗಿ ಇಂಧನ ಖಾತೆ ನೀಡಲಾಗಿದೆ. ಆದರೆ, ಈ ಹೊಸ ಖಾತೆಯ ಹೊಣೆ ವಹಿಸಿಕೊಳ್ಳಲು ಅವರು ನಿರಾಕರಿಸಿದ್ದಾರೆ.
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
ಚಂಢೀಗಡ : ಇತ್ತೀಚಿಗೆ ನಡೆದ ಸಂಟುಪ ಪುನರ್ ರಚನೆ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಅವರಿಂದ ಸ್ಥಳೀಯ ಸರ್ಕಾರ ಇಲಾಖೆ ಖಾತೆ ಕಿತ್ತುಕೊಂಡಿದ್ದು, ಹೊಸದಾಗಿ ಇಂಧನ ಖಾತೆ ನೀಡಲಾಗಿದೆ. ಆದರೆ, ಈ  ಹೊಸ ಖಾತೆಯ ಹೊಣೆ ವಹಿಸಿಕೊಳ್ಳಲು ಅವರು ನಿರಾಕರಿಸಿದ್ದಾರೆ. 
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನಡುವಿನ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು  ಸಿಧು, ದೆಹಲಿಗೆ ದೌಡಾಯಿಸಿದ್ದಾರೆ.
ಒಂದು ವೇಳೆ ಮರಳಿ ಅಧಿಕಾರವನ್ನು ಕೊಡಿಸುವಲ್ಲಿ ಪಕ್ಷದ ನಾಯಕರು ವಿಫಲರಾದರೆ ಸಂಪುಟದಿಂದ ಹೊರಗೆ ಉಳಿಯಲು ಸಿಧು ತೀರ್ಮಾನಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 
ಸಿಧು ಹೊರತುಪಡಿಸಿದರೆ ಉಳಿದ ಎಲ್ಲಾ ಸಚಿವರು ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದಾರೆ. ರಾಹುಲ್ ಗಾಂಧಿ ವೈನಾಡಿನಲ್ಲಿದ್ದಾರೆ. ಆದ್ದರಿಂದ ಸಿಧು ಎರಡು ಮೂರು ದಿನಗಳ ಕಾಲ ದೆಹಲಿಯಲ್ಲಿಯೇ ಉಳಿಯಲಿದ್ದು, ಅಹ್ಮದ್ ಪಟೇಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. 
ಸಿಧು ಸೇರಿದಂತೆ ಕೆಲ ಸಚಿವರನ್ನು ಟಾರ್ಗೆಟ್ ಮಾಡಲಾಗಿದೆ. ಆದರೆ, ಸಿಧು ಇನ್ನೂ ತಮ್ಮ ಅಧಿಕಾರವನ್ನು ಬೇರೆಯವರಿಗೆ ನೀಡಿಲ್ಲ. ಸ್ಥಳೀಯ ಸರ್ಕಾರ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವುದಕ್ಕೆ ಹಲವಾರು ದಾಖಲೆಗಳಿವೆ ಎಂದು ಸಿಧು ಆಪ್ತರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com