ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಯಾರು: ರಾಹುಲ್ ಗಾಂಧಿ ಭವಿಷ್ಯದ ಬಗ್ಗೆ ಸದ್ಯದಲ್ಲಿಯೇ ಸ್ಪಷ್ಟತೆ

ಲೋಕಸಭಾ ಅಧಿವೇಶನ ಆರಂಭಕ್ಕೆ ಒಂದು ವಾರ ಮುನ್ನ ಸಂಸತ್ತಿನ ಕೆಳಮನೆಯಲ್ಲಿ ಪಕ್ಷದ ನಾಯಕರು ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಲೋಕಸಭಾ ಅಧಿವೇಶನ ಆರಂಭಕ್ಕೆ ಒಂದು ವಾರ ಮುನ್ನ ಸಂಸತ್ತಿನ ಕೆಳಮನೆಯಲ್ಲಿ ಪಕ್ಷದ ನಾಯಕರು ಯಾರು ಎಂದು ಕಾಂಗ್ರೆಸ್ ತೀರ್ಮಾನಕ್ಕೆ ಬರಲಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇಷ್ಟು ದಿನ ಪಟ್ಟು ಹಿಡಿದು ಕುಳಿತಿದ್ದ ರಾಹುಲ್ ಗಾಂಧಿಯವರ ಭವಿಷ್ಯದ ತೀರ್ಮಾನದ ಬಗ್ಗೆಯೂ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
ಲೋಕಸಭೆಯಲ್ಲಿ ಹೀನಾಯ ಫಲಿತಾಂಶ ಬಂದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ರಾಹುಲ್ ಗಾಂಧಿ ಇಷ್ಟು ದಿನ ಪಟ್ಟು ಹಿಡಿದು ಕುಳಿತಿದ್ದಾರೆ. ಕಾಂಗ್ರೆಸ್ ನಲ್ಲಿ ಏನು ಬದಲಾವಣೆ ನಡೆಯುತ್ತದೆ ಎಂಬ ಸ್ಫಷ್ಟ ಚಿತ್ರಣ ಯಾರಿಗೂ ಇಲ್ಲ.
ಈ ಮಧ್ಯೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಪಂಜಾಬ್, ರಾಜಸ್ತಾನ, ಚತ್ತೀಸ್ ಗಢ ಮತ್ತು ಪುದುಚೆರಿ ಮುಖ್ಯಮಂತ್ರಿಗಳಿಗೆ ಔತಣಕೂಟ ಸಮಾಲೋಚನಾ ಸಭೆ ಏರ್ಪಡಿಸಿದ್ದಾರೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್.
ಇದೇ 15ರಂದು ದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದ್ದು ಅಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದು ಅದಕ್ಕೆ ಹಿಂದಿನ ದಿನ 14ರಂದು ಔತಣಕೂಟ ನಡೆಯಲಿದೆ.
ಈ ಮಧ್ಯೆ ಮಧ್ಯ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಮುಖ್ಯಮಂತ್ರಿಗಳು ತಮ್ಮ ಪುತ್ರರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಹಠಕ್ಕೆ ಬಿದ್ದು ಅವರ ಗೆಲುವಿಗೆ ಮಾತ್ರ ಗಮನ ಹರಿಸಿದ್ದರಿಂದ ಇತರ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಬಹಿರಂಗವಾಗಿಯೇ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದಾಗಿಯೇ ಇವರಿಬ್ಬರು ಇತ್ತೀಚೆಗೆ ರಾಹುಲ್ ಗಾಂಧಿಯ ಭೇಟಿಗೆ ಪ್ರಯತ್ನಿಸಿದಾಗ ಅವರು ನಿರಾಕರಿಸಿದ್ದರು.
ಅದಲ್ಲದೆ ಕಮಲ್ ನಾಥ್ ಅವರು ಇತ್ತೀಚೆಗೆ ತಮ್ಮ ಪುತ್ರ ಸಂಸದ ನಕುಲ್ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಸರಿ ಎನಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಸಿಎಂ ಆಗಿ ಕಮಲ್ ನಾಥ್ ಪ್ರಧಾನಿಯನ್ನು ಭೇಟಿ ಮಾಡಬಹುದಿತ್ತು, ಆದರೆ ಅವರ ಪುತ್ರನನ್ನು ಕರೆದುಕೊಂಡು ಹೋಗುವ ಅವಶ್ಯಕತೆಯೇನಿತ್ತು ಎನ್ನುತ್ತಾರೆ ಪಕ್ಷದ ಕಾರ್ಯಕಾರಿಣಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com