ಎಸ್‌ಸಿಓ ಶೃಂಗಸಭೆಗೆ ಪ್ರಧಾನಿ ಪ್ರಯಾಣ: ಭಾರತವೇ ಬೇಡ ಅಂದ್ರೂ ಮೋದಿಗೆ ವಿಶೇಷ ಒಪ್ಪಿಗೆ ನೀಡಲು ಸಿದ್ಧ ಎನ್ನುತಿದೆ ಪಾಕ್!

ಪಾಕಿಸ್ತಾನ ಮಾತ್ರ ಮೋದಿಗೆ ವಿಶೇಷವಾಗಿ ವಾಯುಮಾರ್ಗ ತೆರೆಯುವುದಕ್ಕೆ ಸಿದ್ಧ ಎಂದು ಹೇಳಿದೆ.
ಎಸ್‌ಸಿಓ ಶೃಂಗಸಭೆಗೆ ಪ್ರಧಾನಿ ಪ್ರಯಾಣ: ಭಾರತವೇ ಬೇಡ ಅಂದ್ರೂ ಮೋದಿಗೆ ವಿಶೇಷ ಒಪ್ಪಿಗೆ ನೀಡಲು ಸಿದ್ಧ ಎನ್ನುತಿದೆ ಪಾಕ್!
ಎಸ್‌ಸಿಓ ಶೃಂಗಸಭೆಗೆ ಪ್ರಧಾನಿ ಪ್ರಯಾಣ: ಭಾರತವೇ ಬೇಡ ಅಂದ್ರೂ ಮೋದಿಗೆ ವಿಶೇಷ ಒಪ್ಪಿಗೆ ನೀಡಲು ಸಿದ್ಧ ಎನ್ನುತಿದೆ ಪಾಕ್!
ನವದೆಹಲಿ: ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ನಲ್ಲಿ ಜೂನ್ 13 ಮತ್ತು 14ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ವಾಯುಮಾರ್ಗ ಬಳಕೆ ಮಾಡದಿರಲು ನಿರ್ಧರಿಸಿದ್ದಾರೆ. ಆದರೆ ಪಾಕಿಸ್ತಾನ ಮಾತ್ರ ಮೋದಿಗೆ ವಿಶೇಷವಾಗಿ ವಾಯುಮಾರ್ಗ ತೆರೆಯುವುದಕ್ಕೆ ಸಿದ್ಧ ಎಂದು ಹೇಳಿದೆ. 
ಮೋದಿ ಪಾಕ್ ವಾಯು ಮಾರ್ಗ ಬಳಕೆ ಮಾಡುತ್ತಿಲ್ಲ ಎಂದು ವಿದೇಶಾಂಗ ಇಲಾಖೆ ಈಗಾಗಲೇ ಸ್ಪಷ್ಟನೆ ನೀಡಿದೆ. ಆದರೆ ಪಾಕಿಸ್ತಾನದ ವಿಮಾನಯಾನ ಖಾತೆ ಸಚಿವ ಘುಲಮ್ ಸರ್ವಾರ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
" ಪ್ರಧಾನಿ ಇಮ್ರಾನ್ ಖಾನ್ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ವಿಶೇಷವಾಗಿ ವಾಯುಮಾರ್ಗವನ್ನು ತೆರೆಯುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. 
ಸೌಹಾರ್ದಯುತ ಸಂಕೇತವಾಗಿ ಮೋದಿಗೆ ಅವರ ವಿಮಾನ ಪ್ರಯಾಣ ಪಾಕ್ ವಾಯುಮಾರ್ಗದ ಮೂಲಕ ಹಾದು ಹೋಗಲು ಪಾಕಿಸ್ತಾನ ವಿಶೇಷ ಒಪ್ಪಿಗೆ ನೀಡಲು ಸಿದ್ಧ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com