ಅಯೋಧ್ಯೆಗೆ ಉಗ್ರರ ದಾಳಿ ಭೀತಿ; ಗುಪ್ತಚರ ಇಲಾಖೆಯಿಂದ ತೀವ್ರ ಕಟ್ಟೆಚ್ಚರ

ಪವಿತ್ರ ಧಾರ್ಮಿಕ ಸ್ಥಳವಾದ ಅಯೋಧ್ಯೆ ಮೇಲೆ ಸಂಭಾವ್ಯ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಸುತ್ತಮುತ್ತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಕ್ನೊ: ಪವಿತ್ರ ಧಾರ್ಮಿಕ ಸ್ಥಳವಾದ ಅಯೋಧ್ಯೆ ಮೇಲೆ ಸಂಭಾವ್ಯ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಸುತ್ತಮುತ್ತ ತೀವ್ರ ಭದ್ರತೆ ಒದಗಿಸಲಾಗಿದೆ. 
ಉನ್ನತ ಗುಪ್ತಚರ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನೇಪಾಳ ಮೂಲಕ ಉಗ್ರಗಾಮಿಗಳು ಉತ್ತರ ಪ್ರದೇಶವನ್ನು ಪ್ರವೇಶಿಸಿ ಸಾರ್ವಜನಿಕ ಸ್ಥಳಗಳು, ರೈಲ್ವೆ, ಬಸ್ ನಿಲ್ದಾಣಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದ್ದು ಅತ್ಯಧಿಕ ಪ್ರಮಾಣದಲ್ಲಿ ಜೀವಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ. ಈ ರೀತಿ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನು ಆಧರಿಸಿ ಅಯೋಧ್ಯೆಗೆ ಬರುವ ರೈಲು ಮತ್ತು ಬಸ್ಸುಗಳಲ್ಲಿ, ಹೊಟೇಲ್, ನಗರದ ಜನನಿಬಿಡ ಪ್ರದೇಶಗಳು, ಲಾಡ್ಜ್ ಗಳು ಮತ್ತು ಅತಿಥಿ ಗೃಹಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಈ ವಾರಾಂತ್ಯ ಅಯೋಧ್ಯೆಗೆ ವಿವಿಐಪಿಗಳು ಆಗಮಿಸಲಿದ್ದಾರೆ. ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮ ಶುಕ್ರವಾರ, ಕೇಶವ ಮೌರ್ಯ ಶನಿವಾರ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ 18 ಸಂಸದರೊಂದಿಗೆ ಅಯೋಧ್ಯೆ ರಾಮಲಲ್ಲಾಗೆ ಭೇಟಿ ನೀಡಲಿದ್ದಾರೆ. ರಂಜನ್ ಮಬುಮಿ ನ್ಯಾಸ್ ಮುಖ್ಯಸ್ಥ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರ 81ನೇ ಜಯಂತಿಯನ್ನು ಆಚರಿಸಲಿದ್ದಾರೆ.
ಮಿಲಿಟರಿ ಗುಪ್ತಚರ ಇಲಾಖೆಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿಯನ್ನು ಕಳುಹಿಸಲಾಗಿದೆ. ಲಷ್ಕರ್ ಎ ತೊಯ್ಬಾ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು ಉತ್ತರ ಪ್ರದೇಶದ ಪೂರ್ವ ನಗರಗಳಾದ ಫೈಜಾಬಾದ್ ಮತ್ತು ಗೋರಖ್ ಪುರ್ ನಲ್ಲಿ ನೆಲೆ ಹೊಂದಿದ್ದಾರೆ. ಮೊಹಮ್ಮದ್ ಉಮರ್ ಮದ್ನಿ ಇಲ್ಲಿ ಉಗ್ರರ ಶಿಬಿರ ತಾಣಗಳನ್ನು ಹುಟ್ಟುಹಾಕಿ ನಗರದಲ್ಲಿ ಯುವರಕರನ್ನು ನೇಮಕಾತಿ ಮಾಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಇದೇ ಜೂನ್ 18ರಂದು ಅಯೋಧ್ಯಾ 2005ರ ಅಯೋಧ್ಯಾ ಭಯೋತ್ಪಾದಕ ದಾಳಿ ಕೇಸಿನ ತೀರ್ಪು ಹೊರಬರಲಿದೆ. 2005ರ ಜೂನ್ ನಲ್ಲಿ ಐವರು ಉಗ್ರರು ಹತ್ಯೆಯಾಗಿ ನಾಲ್ವರು ಕಾಶ್ಮೀರಿ ಉಗ್ರರು ಬಂಧಿತರಾಗಿದ್ದರು.
ಅಯೋಧ್ಯೆ ಜೊತೆಗೆ ಹತ್ತಿರದ ಅಂಬೇಡ್ಕರ್ ನಗರವನ್ನು ಸಹ ಸೂಕ್ಷ್ಮ ಪ್ರದೇಶವಾಗಿ ತೀವ್ರ ಭದ್ರತೆಯಲ್ಲಿಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com