ಪುಲ್ವಾಮದಲ್ಲಿ ಮತ್ತೆ ಉಗ್ರ ದಾಳಿ: 9 ಯೋಧರಿಗೆ ಗಾಯ!

ಪುಲ್ವಾಮದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ಜೂ.17 ರಂದು ನಡೆದಿದ್ದು, ಘಟನೆಯಲ್ಲಿ 9 ಮಂದಿ ಯೋಧರಿಗೆ ಗಾಯಗಳಾಗಿವೆ.

Published: 17th June 2019 12:00 PM  |   Last Updated: 17th June 2019 10:17 AM   |  A+A-


Nine soldiers injured in IED attack on army patrol in J&K

ಮತ್ತೆ ಪುಲ್ವಾಮದಲ್ಲಿ ಉಗ್ರ ದಾಳಿ: 9 ಯೋಧರಿಗೆ ಗಾಯ!

Posted By : SBV SBV
Source : IANS
ಪುಲ್ವಾಮ: ಪುಲ್ವಾಮದಲ್ಲಿ ಮತ್ತೊಂದು ಭಯೋತ್ಪಾದಕ ಕೃತ್ಯ ಜೂ.17 ರಂದು ನಡೆದಿದ್ದು, ಘಟನೆಯಲ್ಲಿ 9 ಮಂದಿ ಯೋಧರಿಗೆ ಗಾಯಗಳಾಗಿವೆ. 

ಸೇನಾ ಕನ್ವಾಯ್ ನ್ನು ಗುರಿಯಾಗಿರಿಸಿಕೊಂಡು ಉಗ್ರರು ಈ ದಾಳಿ ನಡೆಸಿದ್ದು, ಸುಧಾರಿತ ಸ್ಫೋಟ ಸಾಧನವನ್ನು ಬಳಕೆ ಮಾಡಿದ್ದಾರೆ. 

44 ರಾಷ್ಟ್ರೀಯ ರೈಫಲ್ಸ್ ನ ಗಸ್ತು ವಾಹನದ ಮೇಲೆ ಉಗ್ರರು ನಡೆಸಿರುವ ಈ ಕೃತ್ಯವನ್ನು ಸೇನೆ ದಾಳಿಯ ವಿಫಲ ಯತ್ನ ಎಂದು ಹೇಳಿದೆ. 
 
ಸೇನಾ ತಂಡ ಸುರಕ್ಷಿತವಾಗಿದೆ. ಕೆಲವು ಸಣ್ಣ-ಪುಟ್ಟ ಗಾಯಗಳು ಸಂಭವಿಸಿದೆ, ಸ್ಫೋಟದಲ್ಲಿ ಗಾಯಗೊಂಡ ಸೈನಿಕರನ್ನು ಶ್ರೀನಗರದ ಸೇನಾ ನೆಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp