15 ಸಿಬಿಐಸಿ ಅಧಿಕಾರಿಗಳ ವಜಾ: ಭ್ರಷ್ಟಾಚಾರ ವಿರುದ್ಧ ಮುಂದುವರೆದ ಮೋದಿ ಸರ್ಕಾರದ ಪ್ರಹಾರ

ಭ್ರಷ್ಟ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರದ ಸಮರ ಮುಂದುವರೆದಿದ್ದು, ಕಂದಾಯ, ಕೇಂದ್ರ ಪರೋಕ್ಷ ತೆರಿಗೆ ಹಾಗೂ ಸೀಮಾಸುಂಕ (ಸಿಬಿಐಸ್) ಇಲಾಖೆಯ 15 ಅಧಿಕಾರಿಗಳನ್ನು ವಜಾಗೊಳಿಸಿದೆ.
15 ಸಿಬಿಐಸಿ ಅಧಿಕಾರಿಗಳ ವಜಾ: ಭ್ರಷ್ಟಾಚಾರ ವಿರುದ್ಧ ಮುಂದುವರೆದ ಮೋದಿ ಸರ್ಕಾರದ ಪ್ರಹಾರ
15 ಸಿಬಿಐಸಿ ಅಧಿಕಾರಿಗಳ ವಜಾ: ಭ್ರಷ್ಟಾಚಾರ ವಿರುದ್ಧ ಮುಂದುವರೆದ ಮೋದಿ ಸರ್ಕಾರದ ಪ್ರಹಾರ
ನವದೆಹಲಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರದ ಸಮರ ಮುಂದುವರೆದಿದ್ದು, ಕಂದಾಯ, ಕೇಂದ್ರ ಪರೋಕ್ಷ ತೆರಿಗೆ ಹಾಗೂ ಸೀಮಾಸುಂಕ (ಸಿಬಿಐಸ್) ಇಲಾಖೆಯ 15 ಅಧಿಕಾರಿಗಳನ್ನು ವಜಾಗೊಳಿಸಿದೆ. 
ಲಂಚ, ಕ್ರಿಮಿನಲ್ ಪಿತೂರಿ, ಆರ್ಥಿಕ ಅಪರಾಧಗಳು ಸೇರಿದಂತೆ ಹಲವು ಆರೋಪ ಎದುರಿಸುತ್ತಿದ್ದ 15 ಹಿರಿಯ ಅಧಿಕಾರಿಗಳನ್ನು ಒತ್ತಾಯಪೂರ್ವಕವಾಗಿ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಪ್ರಧಾನ ಆಯುಕ್ತ, ಆಯುಕ್ತ ಹುದ್ದೆಯಲ್ಲಿರುವ ಅಧಿಕಾರಿಗಳೂ ಸಹ ವಜಾಗೊಂಡಿದ್ದಾರೆ. ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬೆನ್ನಲ್ಲೇ ಉನ್ನತ ಮಟ್ಟದಲ್ಲಿರುವ ಭ್ರಷ್ಟ ಅಧಿಕಾರಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ 12 ಅಧಿಕಾರಿಗಳನ್ನು ಮೋದಿ ವಜಾಗೊಳಿಸಿದ್ದರು. ಈಗ ತೆರಿಗೆ ಇಲಾಖೆಗೆ ಸಂಬಂಧಿಸಿದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. 
ಮುಂಬೈ ಜಿಎಸ್ ಟಿ ಜೋನ್ ನ ಸಹಾಯಕ ಆಯುಕ್ತ ವಿನೋದ್ ಕೆಆರ್ ಸಂಘ, ಭುವನೇಶ್ವರ್ ಜಿಎಸ್ ಟಿ ಜೋನ್ ನ ಸಹಾಯಕ ಆಯುಕ್ತ ಎಸ್ ಎಸ್ ಬಿಶ್ಟ್,  ದೆಹಲಿ ಜಿಎಸ್ ಟಿ ಜೋನ್ ನ  ಉಪ ಆಯುಕ್ತ ಸೇರಿದಂತೆ 15 ಅಧಿಕಾರಿಗಳು ಈಗ ವಜಾಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com