ಛತ್ತೀಸ್ ಗಢ: ಸಮಾಜವಾದಿ ಪಕ್ಷದ ನಾಯಕನ ಅಪಹರಿಸಿ ಹತ್ಯೆ

ಛತ್ತೀಸ್‌ಗಢದಲ್ಲಿ ನಕ್ಸಲರು ಸಮಾಜವಾದಿ ಪಕ್ಷದ ನಾಯಕರೊಬ್ಬರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ.

Published: 19th June 2019 12:00 PM  |   Last Updated: 19th June 2019 03:22 AM   |  A+A-


Samajwadi Party leader abducted, killed by Naxals in Chhattisgarh

ಸಂತೋಷ್‌ ಪುನೆಮ್‌

Posted By : LSB LSB
Source : PTI
ಬಿಜಾಪುರ: ಛತ್ತೀಸ್‌ಗಢದಲ್ಲಿ ನಕ್ಸಲರು ಸಮಾಜವಾದಿ ಪಕ್ಷದ ನಾಯಕರೊಬ್ಬರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ.

ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯ ಮಾರಿಮಲ್ಲಾ ಎಂಬಲ್ಲಿ ಮಂಗಳವಾರ ನಕ್ಸಲರಿಂದ ಅಪಹರಣಕ್ಕೊಳಗಾದ ಸಮಾಜವಾದಿ ಪಕ್ಷದ ನಾಯಕ ಹಾಗೂ ಗುತ್ತಿಗೆದಾರ ಸಂತೋಷ್‌ ಪುನೆಮ್‌ ಇಂದು ಶವವಾಗಿ ಪತ್ತೆಯಾಗಿದ್ದಾರೆ.

ಗುತ್ತಿಗೆದಾರರಾಗಿದ್ದ ಸಂತೋಷ್‌ ಅವರನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಕ್ಸಲರು ಅಪಹರಿಸಿದ್ದರು.

ಸಂತೋಷ್‌ ಅವರು ಬಿಜಾಪುರ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಅಲ್ಲದೆ ಎಸ್‌ಪಿ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp