ಟಿಡಿಪಿ ತೊರೆಯಲು ಮುಂದಾದ ನಾಲ್ವರು ರಾಜ್ಯಸಭಾ ಸದಸ್ಯರು

ಮಾಜಿ ಸಚಿವ ವೈ ಎಸ್ ಚೌದರಿ ಸೇರಿದಂತೆ ರಾಜ್ಯಸಭೆಯ ನಾಲ್ವರು ತೆಲುಗು ದೇಶಂ ಪಕ್ಷದ(ಟಿಡಿಪಿ) ಸದಸ್ಯರು, ಪಕ್ಷ ತ್ಯಜಿಸಿ ಸದನದಲ್ಲಿ ತಮ್ಮ..
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
ನವದೆಹಲಿ: ಮಾಜಿ ಸಚಿವ ವೈ ಎಸ್ ಚೌದರಿ ಸೇರಿದಂತೆ ರಾಜ್ಯಸಭೆಯ ನಾಲ್ವರು ತೆಲುಗು ದೇಶಂ ಪಕ್ಷದ(ಟಿಡಿಪಿ) ಸದಸ್ಯರು, ಪಕ್ಷ ತ್ಯಜಿಸಿ ಸದನದಲ್ಲಿ ತಮ್ಮ ಬಣಕ್ಕೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವಂತೆ ಕೋರುವ ಸಾಧ್ಯತೆಯಿದೆ.
ಪಕ್ಷ ತ್ಯಜಿಸಲಿರುವ ಇತರೆ ಸದಸ್ಯರೆಂದರೆ ಸಿ ಎಂ ರಮೇಶ್, ಗರಿಕಪತಿ ಮೋಹನ್ ರಾವ್ ಎಂದು ಮೂಲಗಳು ತಿಳಿಸಿವೆ.
ಟಿ ಜಿ ವೆಂಕಟೇಶ್ ಅವರು ರಾಜ್ಯ ಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಸದನದಲ್ಲಿ ಪಕ್ಷದಲ್ಲಿನ ವಿಭಜನೆ ಗುರುತಿಸಿ ಅವರಿಗೆ ಪ್ರತ್ಯೇಕ ಸ್ಥಾನಮಾನ ನೀಡುವಂತೆ ಪತ್ರ ಬರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಚೌದರಿ ಅವರು ನವೆಂಬರ್ 2014 ರಿಂದ ಮಾರ್ಚ್ 2018 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾಗಿ ಕೆಲಸ ಮಾಡಿದ್ದರು.
ಚೌದರಿ, ರಮೇಶ್ ಮತ್ತು ವೆಂಕಟೇಶ್ ಅವರು ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದರೆ, ರಾವ್ ತೆಲಂಗಾಣದ ಸದಸ್ಯರಾಗಿದ್ದು, ರಾಜ್ಯದ ಬಿಜೆಪಿ ಮುಖಂಡರು ಇವರುಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಚೌದರಿ ಮತ್ತು ಆಗಿನ ವಿಮಾನಯಾನ ಸಚಿವರಾಗಿದ್ದ ಅಶೋಕ್ ಗಜಪತಿ ರಾಜು ಅವರುಗಳು 2018 ರಲ್ಲಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಎನ್ ಡಿಎ ಮೈತ್ರಿಯಿಂದ ಹೊರ ಬರಲು ನಿರ್ಧರಿಸಿದಾಗ ಸರ್ಕಾರವನ್ನು ತೊರೆದು ಹೊರಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com