ಮೋದಿ ಸರ್ಕಾರದಿಂದ ಶುಕ್ರವಾರ ಲೋಕಸಭೆಯಲ್ಲಿ ಹೊಸ ತ್ರಿವಳಿ ತಲಾಕ್ ಮಸೂದೆ ಮಂಡನೆ

ತ್ರಿವಳಿ ತಲಾಕ್ ಪದ್ದತಿ ನಿಷೇಧಿಸಲು ಕುರಿತಂತೆ ಹೊಸ ಮಸುದೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಎನ್.ಡಿ.ಎ. ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಿದೆ.
ತ್ರಿವಳಿ ತಲಾಕ್ ಸಂಗ್ರಹ ಚಿತ್ರ
ತ್ರಿವಳಿ ತಲಾಕ್ ಸಂಗ್ರಹ ಚಿತ್ರ
ನವದೆಹಲಿ: ತ್ರಿವಳಿ ತಲಾಕ್ ಪದ್ದತಿ ನಿಷೇಧಿಸಲು ಕುರಿತಂತೆ ಹೊಸ ಮಸುದೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಎನ್.ಡಿ.ಎ. ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಿದೆ.
ಲೋಕಸಭೆಯ ಕಾರ್ಯಸೂಚಿಯಲ್ಲಿ ಶುಕ್ರವಾರ ಪಟ್ಟಿ ಮಾಡಲಾಗಿರುವ  ವಿಷಯಗಳಲ್ಲಿ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಮಸೂದೆ, 2019 ಇದ್ದು ಇದರಲ್ಲಿ ಈ ಹಿಂದಿನ ಎನ್ ಡಿಎ ಸರ್ಕಾರವು ಫೆಬ್ರವರಿಯಲ್ಲಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ಮುರಿದು ಹೊಸ ಮಸೂದೆ ಮಂಡಿಸಲಿದೆ.
ಕಳೆದ ಬಾರಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ರಾಜ್ಯಸಬೆಯಲ್ಲಿ ಬಾಕಿ ಉಳಿದಿರುವಂತೆಯೇ 16 ನೇ ಲೋಕಸಭೆ ವಿಸರ್ಜನೆಯಾಗಿದ್ದ ಕಾರಣ ಆ ಮಸೂದೆ ತನ್ನ ಮೌಲ್ಯ ಕಳೆದುಕೊಂಡಿತ್ತು. ಇದೀಗ ಮತ್ತೆ ಮೋದಿ ಸರ್ಕಾರ ಹೊಸದಾಗಿ ತ್ರಿವಳಿ ತಲಾಕ್ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಂಡನೆ ಮಾಡಬೇಕಿದೆ.
ತ್ವರಿತ ತ್ರಿವಳಿ ತಲಾಕ್ ಅಭ್ಯಾಸವನ್ನು ದಂಡನಾರ್ಹ ಅಪರಾಧವನ್ನಾಗಿ ಪರಿಗಣಿಸಲು ಪ್ರಸ್ತಾಪಿಸಿರುವ  ಈ ಮಸೂದೆಯು ವಿರೋಧ ಪಕ್ಷಗಳ ಆಕ್ಷೇಪಣೆಯನ್ನು ಎದುರಿಸಿದ್ದು, ತನ್ನ ಹೆಂಡತಿಯಿಂದ ವಿಚ್ಚೇದನ ಪಡೆದ ಮಾತ್ರಕ್ಕೆ ಒಬ್ಬನಿಗೆ ಜೈಲು ಶಿಕ್ಷೆ ವಿಧಿಸುವುದು ಕಾನೂನು ಸಮ್ಮತವಾಗಲಾರದು  ಎಂದು ವಾದಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com