ಯೋಗ ದಿನಾಚರಣೆ, ಯೋಗಾಭ್ಯಾಸ ನಿರತ ಸೇನೆ, ಶ್ವಾನ ದಳದ ಕುರಿತು ರಾಹುಲ್ ಗಾಂಧಿ ಟ್ವೀಟ್: ಟ್ವಿಟಿಗರಿಂದ ತಪರಾಕಿ!

ದೇಶಾದ್ಯಂತ ಯೋಗ ದಿನಾಚರಣೆಯನ್ನು ಯೋಧ, ಸಚಿವ, ಸಾಮಾನ್ಯರಾದಿಯಾಗಿ ಎಲ್ಲರೂ ಆಚರಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Published: 21st June 2019 12:00 PM  |   Last Updated: 22nd June 2019 01:49 AM   |  A+A-


Rahul Gandhi makes fun of Yoga Day, Indian Army and its dog squad

ಯೋಗದಿನಾಚರಣೆ, ಯೋಗಾಭ್ಯಾಸ ನಿರತ ಸೇನೆ, ಶ್ವಾನ ದಳದ ಕುರಿತು ರಾಹುಲ್ ಗಾಂಧಿ ಗೇಲಿ: ಟ್ವಿಟಿಗರಿಂದ ತಪರಾಕಿ!

Posted By : SBV SBV
Source : The New Indian Express
ನವದೆಹಲಿ: ದೇಶಾದ್ಯಂತ ಯೋಗ ದಿನಾಚರಣೆಯನ್ನು ಯೋಧ, ಸಚಿವ, ಸಾಮಾನ್ಯರಾದಿಯಾಗಿ ಎಲ್ಲರೂ ಆಚರಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಸೇನೆಯ ಯೋಧರು ಶ್ವಾನ ದಳದೊಂದಿಗೆ ಯೋಗಾಭ್ಯಾಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರನ್ನೂ ಆಕರ್ಷಿಸಿದ್ದ ಈ ಚಿತ್ರ ವೈರಲ್ ಆಗಿತ್ತು. ಇದನ್ನೇ ಬಳಸಿಕೊಂಡು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೋದಿ ಅವರನ್ನು ಟೀಕಿಸುವ ಭರದಲ್ಲಿ ಅದಕ್ಕೆ ನ್ಯೂ ಇಂಡಿಯಾ ಎಂಬ ಕ್ಯಾಪ್ಷನ್ ನೀಡಿದ್ದರು. 

ರಾಹುಲ್ ಗಾಂಧಿ ಅವರ ಟ್ವೀಟ್ ಗೆ ಉರಿದುಬಿದ್ದಿರುವ ಟ್ವೀಟಿಗರು ಹಾಗೂ ಬಿಜೆಪಿ ತಮ್ಮ ಸಾಕು ನಾಯಿಯೊಂದಿಗೆ ಫೋಟೋ ಹಾಕುವ ರಾಹುಲ್ ಗಾಂಧಿ ಅವರಿಗೆ ಜೀವನದಲ್ಲಿ ಎಲ್ಲವೂ ತಮಾಷೆಯ ಸಂಗತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.  

ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಭಾರತ ಉದಯಿಸುತ್ತಿದ್ದರೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಕಾಂಗ್ರೆಸ್ ಉದಯಿಸುತ್ತಿದೆ ಎಂದು ಕೆಲವರು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ. 

ಇನ್ನು ರಾಹುಲ್ ಗಾಂಧಿ ಟ್ವೀಟ್ ನ್ನು ಖಂಡಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ರಾಹುಲ್ ಗಾಂಧಿ ಇನ್ನೂ ಪಾಠ ಕಲಿತಿಲ್ಲ, ಒಂದೇ ಬಾರಿಗೆ ಭಾರತೀಯ ಸೇನೆ, ಧೀರ ಯೋಧರು, ಅದ್ಭುತ ಶ್ವಾನ ದಳ, ದೇಶದ ಸಂಸ್ಕೃತಿಯಾದ ಯೋಗವನ್ನು ಅವಮಾನಿಸಿದ್ದಾರೆ. 

ಯುವ ಕಾಂಗ್ರೆಸ್ ಕಾರ್ಯಕರ್ತರು (ಯಾರಾದರೂ ಇದ್ದರೆ)  ಅವರು ಇಂತಹ ವ್ಯಕ್ತಿಯ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವುದರ ಬಗ್ಗೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp