ಯೋಗ ಡೇ ಟ್ವೀಟ್ : ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು

ವಿಶ್ವ ಯೋಗ ದಿನದಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಸೇನೆಯ ಇಮೇಜ್ ನ್ನು ಅಪಮಾನಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಮೂಲದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವ ಯೋಗ ದಿನದಂದು  ರಾಹುಲ್ ಗಾಂಧಿ ಟ್ವೀಟ್ ಮೂಲಕ ಸೇನೆಯ ಇಮೇಜ್ ನ್ನು ಅಪಮಾನಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಮೂಲದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ಸೇನೆಗೆ ಅಗೌರವ ನೀಡುವ  ಉದ್ದೇಶದಿಂದ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಕೀಲ ಅಟಲ್ ದುಬೆ ಆರೋಪಿಸಿದ್ದಾರೆ. ಐಪಿಸಿ ಸೆಕ್ಷನ್ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಜೂನ್ 21 ರಂದು 4.12ರ ಸಮಯದಲ್ಲಿ ನವ ಭಾರತ ಎಂಬ ಕ್ಯಾಪ್ಷನ್  ನೀಡಿ  ರಾಹುಲ್ ಗಾಂಧಿ  ಎರಡು ಟ್ವೀಟ್ ಮಾಡಿದ್ದಾರೆ. ಯೋಧರೊಂದಿಗೆ ವ್ಯಾಯಾಮಾ ಮಾಡುತ್ತಿರುವ ಸೇನೆಯ ಶ್ವಾನಗಳ ಚಿತ್ರಗಳನ್ನು ಪಡೆಯಲಾಗಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. 
ಸಾರ್ವಜನಿಕ ಶಾಂತಿಯನ್ನು ಕೆಡಿಸುವ ಉದ್ದೇಶದಿಂದ ಈ ರೀತಿಯ ಪೋಸ್ಟ್ ಮಾಡಲಾಗಿದ್ದು, ಇದು ಸೇನೆಗೆ ಮಾಡಿದ ಅವಮಾನವಾಗಿದ್ದು, ಕಾನೂನು ಪ್ರಕಾರ ರಾಹುಲ್ ಗಾಂಧಿಗೆ ಶಿಕ್ಷೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com