ಕಾಶ್ಮೀರ: ಪಿಎಸ್ಎ ಕಾಯ್ದೆ ಅಡಿ ಯಾಸಿನ್ ಮಲಿಕ್ ಬಂಧನ, ಜಮ್ಮು ಜೈಲಿಗೆ ಶಿಫ್ಟ್

ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಬಂಧಿಸಲಾಗಿದ್ದು...

Published: 07th March 2019 12:00 PM  |   Last Updated: 07th March 2019 03:14 AM   |  A+A-


JKLF Chief Yasin Malik booked under PSA, being shifted to Jammu jail

ಯಾಸಿನ್ ಮಲಿಕ್

Posted By : LSB LSB
Source : ANI
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಬಂಧಿಸಲಾಗಿದ್ದು, ಜಮ್ಮು ಜೈಲಿಗೆ ಸ್ಥಳಾಂತರಿಸಲಾಗಿದೆ.

ಮಲಿಕ್ ಅವರ ವಿರುದ್ಧ ಪಿಎಸ್ಎ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದ್ದು, ಅವರನ್ನು ಜಮ್ಮುವಿನ ಕೋಟ್ ಬಲ್ವಾಲ್ ಜೈಲಿಗೆ ಕರೆದೊಯ್ಯಲಾಗಿದೆ ಎಂದು ಜೆಕೆಎಲ್ಎಫ್ ವಕ್ತಾರರು ತಿಳಿಸಿದ್ದಾರೆ.

ಮಲಿಕ್ ಅವರ ಬಂಧನವನ್ನು ಮತ್ತು ಅವರ ವಿರುದ್ಧ ಪಿಎಸ್ಎ ಕಾಯ್ದೆ ಬಳಸಿರುವುದನ್ನು ಜೆಕೆಎಲ್ಎಫ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮಲಿಕ್ ಅವರನ್ನು ಫೆಬ್ರವರಿ 22ರಂದು ಬಂಧಿಸಲಾಗಿದ್ದು, ಕೊಥಿಬಾಗ್ ಪೊಲೀಸ್ ಠಾಣೆಯ ಜೈಲಿನಲ್ಲಿ ಇಡಲಾಗಿತ್ತು. ಸಿಬಿಐ ಮಲಿಕ್ ವಿರುದ್ಧ ಪಿಎಸ್‍ಎ ಅಡಿ ಕೇಸ್ ದಾಖಲಿಸಿದೆ.

ಪಿಎಸ್‍ಎ ಕಾಯ್ದೆ ಏನು ಹೇಳುತ್ತೆ?
ಸಾರ್ವಜನಿಕರ ಸುರಕ್ಷತಾ ಕಾಯ್ದೆ(ಪಿಎಸ್‍ಎ) ಅಡಿ ಪ್ರಕರಣ ದಾಖಲಾದರೆ ಆ ವ್ಯಕ್ತಿಯನ್ನು 6 ತಿಂಗಳ ಕಾಲ ನ್ಯಾಯಾಲಯಕ್ಕೆ ಹಾಜರು ಪಡಿಸುವ ಅಗತ್ಯ ಇರುವುದಿಲ್ಲ. 2 ವರ್ಷಗಳ ಕಾಲ ನ್ಯಾಯಾಂಗ ಸಹ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp