3 ಬಾರಿ ಯತ್ನಿಸಿದರೂ ಪ್ರವೇಶ ಇಲ್ಲ: ಬಾಲಕೋಟ್​ ದಾಳಿ ಸ್ಥಳಕ್ಕೆ ಮಾಧ್ಯಮಗಳಿಗೆ ಪಾಕ್​ ನಿರ್ಬಂಧ

ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ಬಾಲಕೋಟ್​ ನ ಉಗ್ರರ ಅಡಗುತಾಣಗಳಿಗೆ ಭೇಟಿ ನೀಡಲು ಪತ್ರಕರ್ತರಿಗೆ ಪಾಕಿಸ್ತಾನ ಸರ್ಕಾರ...
ದಾಳಿ ನಡೆದ ಸ್ಥಳ
ದಾಳಿ ನಡೆದ ಸ್ಥಳ
ಇಸ್ಲಾಮಾಬಾದ್: ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ಬಾಲಕೋಟ್​ ನ ಉಗ್ರರ ಅಡಗುತಾಣಗಳಿಗೆ ಭೇಟಿ ನೀಡಲು ಪತ್ರಕರ್ತರಿಗೆ ಪಾಕಿಸ್ತಾನ ಸರ್ಕಾರ ಮತ್ತೆ ಅನುಮತಿ ನಿರಾಕರಿಸಿದೆ.
ಜೈಶ್ - ಇ- ಮೊಹಮ್ಮದ್ ಉಗ್ರ ಸಂಘಟನೆಯ ಮದರಸಾ ಇರುವ ಸ್ಥಳಕ್ಕೆ ಭೇಟಿ ನೀಡಲು ಪಾಕಿಸ್ತಾನ ಸರ್ಕಾರ ರಾಯಟರ್ಸ್ ಸುದ್ದಿಸಂಸ್ಥೆಯ ಪ್ರತಿನಿಧಿಗಳಿಗೆ ಮತ್ತೊಮ್ಮೆ ಅವಕಾಶ ನಿರಾಕರಿಸಿದೆ. ಕಳೆದ 9 ದಿನಗಳಲ್ಲಿ ಮೂರನೇ ಬಾರಿ ಮಾಧ್ಯಮ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ.
ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಮೂರು ಬಾರಿ ಯತ್ನಿಸಿ ವಿಫಲವಾಗಿದ್ದೇವೆ. ಭದ್ರತಾ ದೃಷ್ಟಿಯಿಂದ ಪಾಕ್​ ಸೇನೆಯು ಯಾರಿಗೂ ಸ್ಫೋಟ ಸ್ಥಳಕ್ಕೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ರಾಯಟರ್ಸ್ ವರದಿಗಾರರು ಹೇಳಿದ್ದಾರೆ.
ವೈಮಾನಿಕ ದಾಳಿಯಲ್ಲಿ ಭಾರೀ ಸಂಖ್ಯೆಯ ಜೈಷೆ ಉಗ್ರರು, ತರಬೇತಿದಾರರು, ಉಗ್ರ ಸಂಘಟನೆಯ ಹಿರಿಯ ಕಮಾಂಡರ್​ಗಳು, ಜಿಹಾದಿಗಳು ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್​ ಗೋಖಲೆ ಅವರು ಹೇಳಿದ್ದಾರೆ. ಆದರೆ ದಾಳಿಯಲ್ಲಿ ಯಾವುದೇ ಸಾವು-ನೋವಾಗಿಲ್ಲ. ಕೆಲವು ಪೈನ್​ ಮರಗಳು ಮುರಿದಿವೆ ಎಂದು ಪಾಕ್ ವಾದಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com