ಭಾರತದಲ್ಲಿ ಮುಸ್ಲಿಮರನ್ನು ಬಾಡಿಗೆದಾರರ ರೀತಿ ಪರಿಗಣನೆ: ಅಜಂ ಖಾನ್

ಪ್ರಸ್ತುತ ಸನ್ನಿವೇಶದಲ್ಲಿ ಭಾರತದಲ್ಲಿ ಮುಸ್ಲಿಂರನ್ನು ಬಾಡಿಗೆದಾರರ ರೀತಿಯಲ್ಲಿ ಕಾಣಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹೇಳಿದ್ದಾರೆ.
ಅಜಂಖಾನ್
ಅಜಂಖಾನ್

ಲಖನೌ:  ಪ್ರಸ್ತುತ ಸನ್ನಿವೇಶದಲ್ಲಿ ಭಾರತದಲ್ಲಿ ಮುಸ್ಲಿಂರನ್ನು ಬಾಡಿಗೆದಾರರ ರೀತಿಯಲ್ಲಿ  ಕಾಣಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಹೇಳಿದ್ದಾರೆ.

ಮುಸ್ಲಿಂ ಪವಿತ್ರ ಹಬ್ಬ ರಂಜಾನ್ ಜೊತೆಗೆ ಚುನಾವಣಾ ವೇಳಾಪಟ್ಟಿ ಸಂಘರ್ಘ ಕುರಿತಂತೆ ಪ್ರತಿಕ್ರಿಯಿಸಿದ ಅಜಂಖಾನ್, ಬಿಜೆಪಿ ಆಡಳಿತಾವಧಿಯಲ್ಲಿ ಆರ್ ಎಸ್ ಎಸ್  ನಮ್ಮನ್ನು ದ್ವಿತೀಯ ದರ್ಜೆ ನಾಗರಿಕರೆಂದು  ಪರಿಗಣಿಸಲಾಗಿತ್ತು. ಈಗ ನಾವು ಬಾಡಿಗೆದಾರರಂತೆ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚುನಾವಣೆ ದಿನಾಂಕ ಬದಲಾವಣೆ ಉತ್ತಮವಾದುದ್ದಲ್ಲ ಆದರೆ,  ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಈ ಬಗ್ಗೆ ಯೋಚಿಸಬೇಕಾಗಿತ್ತು. ಚುನಾವಣಾ ಆಯೋಗ ಈ ಬಗ್ಗೆ ಚಿಂತೆ ಮಾಡಿಲ್ಲ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳ ಸೇರಿದಂತೆ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣಬೇಕಾಗುತ್ತದೆ.ರಂಜಾನ್ ಹಬ್ಬ ಮುಸ್ಲಿಂರಿಗೆ ಪವಿತ್ರ ಹಬ್ಬವಾಗಿದೆ ಎಂದಿದ್ದಾರೆ.

ಕಳೆದ ತಿಂಗಳು ಭಾರತೀಯ ವಾಯುಪಡೆ ನಡೆಸಿದ ದಾಳಿಯ ಹೆಸರಿನಲ್ಲಿ ಮತಗಳನ್ನು ಪಡೆಯಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು. ಇದೇ ಮೊದಲ ಬಾರಿಗೆ ಹುತಾತ್ಮ ಯೋಧರ ಹೆಸರಿನಲ್ಲಿ ಚುನಾವಣಾ ರಾಜಕೀಯ ಮಾಡಲಾಗುತ್ತಿದೆ. ಇದು ಆಗಬಾರದು ಎಂದು ಅವರು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com