ಜಮ್ಮು ಕಾಶ್ಮೀರ: ಎನ್‌ಸಿಪಿ .ಕಾರ್ಯಕರನ ಮೇಲೆ ಉಗ್ರರಿಂದ ಗುಂಡಿನ ದಾಳಿ

ಜಮ್ಮು ಕಾಶ್ಮೀರದ ರಾಜಕೀಯ ಮುಖಂಡ, ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತ ಮೊಹದ್ ಇಸ್ಮಾಯಿಲ್ ವಾನಿ (60) ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

Published: 14th March 2019 12:00 PM  |   Last Updated: 14th March 2019 09:50 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : ANI
ಶ್ರೀನಗರ: ಜಮ್ಮು ಕಾಶ್ಮೀರದ ರಾಜಕೀಯ ಮುಖಂಡ, ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತ ಮೊಹದ್ ಇಸ್ಮಾಯಿಲ್ ವಾನಿ (60)  ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಪರಿಣಾಮ ವಾನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಶ್ಮೀರ ದಕ್ಷಿಣ ಭಾಗದ ಅನಂತ್ ನಾಗ್ ಜಿಲ್ಲೆ ತಾಜೀಪುರ ಬಿಜ್ಜಿಹರ ಎಂಬಲ್ಲಿ ಘಟನೆ ನಡೆದಿದ್ದು ಗಾಯಾಳು ವಾನಿಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಮೂಲಗಳು ಹೇಳಿದೆ./

ಪುಲ್ವಾಮಾ ದಾಳಿ ಹಾಗೂ ಆ ನಂತ್ರಾ ಭಾರತ ನಡೆಸಿದ್ದ ಏರ್ ಸ್ಟ್ರೈಕ್ ಬಳಿಕ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಭಾರತ ಸತತ ಪ್ರಯತ್ನದಲ್ಲಿದೆ. ಈ ನಡುವೆಯೂ ಗಡಿ ಭಾಗದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಈಗ ಉಗ್ರರು ಎನ್.ಸಿ.ಪಿ. ಕಾರ್ಯಕರ್ತನ ಮೇಲೆ ಗುಂಡು ಹಾರಿಸಿ ಕ್ರೌರ್ಯ ಮೆರೆದಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp