ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಯುಷ್ಮಾನ್ ಭಾರತ್ ಗಿಂತ ಉತ್ತಮ ಆರೋಗ್ಯ ಯೋಜನೆ: ರಾಹುಲ್ ಗಾಂಧಿ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗಿಂತ ಉತ್ತಮ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ರಾಯಪುರ್(ಛತ್ತೀಸ್ ಗಢ): ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗಿಂತ ಉತ್ತಮ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಛತ್ತೀಸ್​ಗಢದ ರಾಯಪುರದಲ್ಲಿ  ಆರೋಗ್ಯಾಧಿಕಾರಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ಗೆ ಹಲವು ಇತಿಮಿತಿಗಳಿದೆ. ಇದು ಸೀಮಿತ ನೆಲೆಯಲ್ಲಿ ಕೆಲವಷ್ಟು ಜನರನ್ನು ಮಾತ್ರವೇ ಒಳಗೊಳ್ಳುವ ಯೋಜನೆಯಾಗಿದೆ. ಎಂದು ಟೀಕಿಸಿದ್ದಾರೆ.
"ಆಯುಷ್ಮಾನ್ ಭಾರತ್ ಆಸ್ಪತ್ರೆಗಳು ಮತ್ತು ವೈದ್ಯಕೀಯ ವೃತ್ತಿಪರರಿಂದ ಸರಿಯಾದ ಬೆಂಬಲಪಡೆಯದ ವಿಮಾ ಯೋಜನೆಯಾಗಿದೆ.. ಇದು "ಸೀಮಿತ ಸಂಖ್ಯೆಯ "ಆರೋಗ್ಯ ಸಮಸ್ಯೆಗಳಿಗೆ  ಮಾತ್ರ ಪರಿಹಾರ ಒದಗಿಸುತ್ತದೆ.ಇದು ಭಾರತದಲ್ಲಿ 15 ರಿಂದ 20 ಶ್ರೀಮಂತ ಉದ್ಯಮಿಗಳಿಗೆ ಲಭದಾಯಕವಾಗಲಿದೆ. ನಾವು ಹಾಗೆ ಮಾಡಲಾರೆವು. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜ್ಜನಿಕರಿಗೆ ಸಂಪೂರ್ಣ ಲಾಭ ದೊರಕಬೇಕು"
ಆಯುಷ್ಮಾನ್ ಭಾರತ್ ಯೋಜನೆ ಎಂದು ಪ್ರಸಿದ್ಧಿ ಪಡೆದ ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ ಕಳೆದ ವರ್ಷ ಸೆಪ್ಟೆಂಬರ್ ನಲಿ ಪ್ರಾರಂಬವಾಗಿದ್ದು ಈ ಯೋಜನೆಯಡಿ  5 ಲಕ್ಷದಿಂದ 500 ಮಿಲಿಯನ್ ಬಡ ಕುಟುಂಬಗಳಿಗೆ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಆದರೆ ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ ಮತ್ತು ದೆಹಲಿಗಳಂತಹ ಕೆಲವು ರಾಜ್ಯಗಳುಈ ಯೋಜನೆ ಜಾರಿಗೆ ಇನ್ನೂ ಮುಂದಾಗಿಲ್ಲ.
ಹೆಲ್ತ್ ಕೇರ್ ಎಂಬುದು ಒಂದು ಮೂಲಭೂತ ವಿಚಾರ. ಹಾಗಾಗಿ ನಾವದನ್ನು ದೃಢವಾಗಿ ನಿರ್ಮಿಸಬೇಕು. 2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸುವ ಹಣವನ್ನು  ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಿದೆ. ನಾವು ಸೀಮಿತ ಸಂಖ್ಯೆಯ ಜನರಿಗೆ ಬೃಹತ್ ಪ್ರಮಾಣದ ಹಣ ಸಂಪಾದನೆ ಮಾಡಲು ಅವಕಾಶ ಒದಗಿಸುವುದಿಲ್ಲ. ಎಂದು ರಾಹುಲ್ ಹೇಳೀದ್ದಾರೆ.
"ಭಾರತವು ಗ್ರಾಮೀಣ ವ್ಯವಸ್ಥೆಯಿಂದ ನಗರ ವ್ಯವಸ್ಥೆಗೆ ಪರಿವರ್ತನೆಯಾಗುತ್ತಿದೆ. ಆದರೆ ಈ ಬದಲಾವಣೆ ಸುಲಭವಾಗಿಲ್ಲ, ಬದಲಿಗೆ ಆಘಾತಕಾರಿಯಾಗಿದೆ. ಖಾಸಗಿ ಸಂಸ್ಥೆಗಳು, ದೊಡ್ಡ ವ್ಯವಹಾರ ವಲಯದವರು  ವಿಮೆ ಮತ್ತು  ಆರೋಗ್ಯ ಕ್ಷೇತ್ರವನ್ನು ಸಂಪೂರ್ಣ ಆವರಿಸಿಕೊಂಡು ಲಾಭ ಗಿಟ್ಟಿಸಲು ನೋಡುತ್ತಿದ್ದಾರೆ. ಆದರೆ ಈ ಕ್ಷೇತ್ರದ ಮೂಲ ಹಿಡಿತ  ಸರ್ಕಾರದ ಮತ್ತು ಸಾರ್ವಜನಿಕ ವಲಯದಲ್ಲೇ ಇರಬೇಕು.ಸಂಪೂರ್ಣವಾಗಿ ಖಾಸಗೀಕರಣಗೊಳ್ಳುವುದು ಒಳ್ಳೇದಲ್ಲ" ಅವರು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೆಲ್ತ್ ಕೇರ್ ಸಂಬಂಧ ಮಹತ್ವದ ಘೋಷಣೆ ಸೇರಿಸಬಹುದು."ನಮ್ಮ ಪ್ರಣಾಳಿಕೆಯಲ್ಲಿ ಹೆಲ್ತ್ ಕೇರ್ ಆಕ್ಟ್ ಅನ್ನು ಹಕ್ಕೆಂದು ಪರಿಗಣಿಸುತ್ತೇವೆ.ಲ್ಲಿ ನಾವು ಎಲ್ಲಾ ಭಾರತೀಯರಿಗೆ ಗರಿಷ್ಠ ಆರೋಗ್ಯವನ್ನು ಖಾತರಿ ನೀಡುತ್ತೇವೆ. ಸರ್ಕಾರದ  ಖರ್ಚನ್ನು ಜಿಡಿಪಿಯ 3% ಗೆ ಹೆಚ್ಚಿಸುವುದಲ್ಲದೆ  ಆರೋಗ್ಯ ವೃತ್ತಿಪರರ ಸಂಖ್ಯೆಯನ್ನು ಹೆಚ್ಚಿಸುತ್ತೇವೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com