ಹೋಳಿ ಆಚರಣೆ ವೇಳೆ ಬಿಜೆಪಿ ಶಾಸಕನ ಮೇಲೆ ಗುಂಡಿನ ದಾಳಿ, ಕಾಲಿಗೆ ಗಾಯ

ಪಕ್ಷದ ಕಚೇರಿಯಲ್ಲಿ ಹೋಳಿ ಆಚರಿಸುತ್ತಿದ್ದ ವೇಳೆ ಉತ್ತರ ಪ್ರದೇಶದ ಲಕಿಂಪುರ್​ ಕ್ಷೇತ್ರದ ಬಿಜೆಪಿ ಶಾಸಕ ಯೋಗೇಶ್​ ವರ್ಮಾ ಅವರ ಮೇಲೆ ಗುರುವಾರ...

Published: 21st March 2019 12:00 PM  |   Last Updated: 21st March 2019 05:22 AM   |  A+A-


BJP MLA Shot at After Argument Breaks Out During Holi Festivities at Party Office

ಯೋಗೇಶ್ ವರ್ಮಾ

Posted By : LSB LSB
Source : Online Desk
ಲಖನೌ: ಪಕ್ಷದ ಕಚೇರಿಯಲ್ಲಿ ಹೋಳಿ ಆಚರಿಸುತ್ತಿದ್ದ ವೇಳೆ ಉತ್ತರ ಪ್ರದೇಶದ ಲಕಿಂಪುರ್​ ಕ್ಷೇತ್ರದ ಬಿಜೆಪಿ ಶಾಸಕ ಯೋಗೇಶ್​ ವರ್ಮಾ ಅವರ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಲಕಿಂಪುರ್ ಬಿಜೆಪಿ ಕಚೇರಿಯಲ್ಲಿ ಹೋಳಿ ಆಚರಿಸುತ್ತಿದ್ದ ಶಾಸಕರ ಹಾಗೂ ಕಾರ್ಯಕರ್ತರ ನಡುವ ತೀವ್ರಾ ವಾಗ್ವಾದ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಅದು ಶಾಸಕರ ಕಾಲಿಗೆ ತಗುಲಿದೆ. ಶಾಸಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ಲಕಿಂಪುರ್​ ಜಿಲ್ಲಾಧಿಕಾರಿ ಎಸ್ ಸಿಂಗ್ ಅವರು ತಿಳಿಸಿದ್ದಾರೆ.

ಯೋಗೇಶ್​ ವರ್ಮಾ ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಜತೆ ಹೋಳಿ ಹಬ್ಬವನ್ನು ಆಚರಿಸುತ್ತಿದ್ದರು. ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದಾನೆ. ಗುಂಪು ದೊಡ್ಡದಾಗಿದ್ದರಿಂದ, ದಾಳಿ ಮಾಡಿದವರು ಯಾರು ಎಂಬುದು ತಕ್ಷಣವೇ ಗೊತ್ತಾಗಿಲ್ಲ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp