ಚುನಾವಣೆ: ಪ್ರಧಾನಿ ಮೋದಿ ಭಾವಚಿತ್ರವಿರುವ ರೈಲ್ವೆ ಟಿಕೆಟ್ ಗಳನ್ನು ಹಿಂಪಡೆಯಲು ರೈಲ್ವೆ ಇಲಾಖೆ ನಿರ್ಧಾರ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ರೈಲ್ವೆ ಟಿಕೆಟ್ ಗಳನ್ನು ಹಿಂಪಡೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ರೈಲ್ವೆ ಟಿಕೆಟ್ ಗಳನ್ನು ಹಿಂಪಡೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಟಿಕೆಟ್ ಹಿಂಪಡೆಯುವಿಕೆಯ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದೆ ಎಂದು ಅಖಿಲ ಬಾರತ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೊಗಕ್ಕೆ ದೂರು ಸಲ್ಲಿಸಿದ ಬಳಿಕ ರೈಲ್ವೆ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.
ಸರ್ಕಾರಿ ಯೋಜನೆಯೊಂದರ ಹಿನ್ನೆಲೆಯಲ್ಲಿ ರೈಲ್ವೆ ಟಿಕೆಟ್ ಗಳ ಮೇಲೆ ಮೋದಿ ಭಾವಚಿತ್ರವನ್ನು ಹಾಕಲಾಗುತ್ತಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ನಿಯೋಗದ ಸದಸ್ಯರಾದ ಡೆರೆಕ್ ಒ'ಬ್ರೇನ್, ಸುಖೇಂದ್ ಶೇಖರ್ ರೇ ಹಾಗೂ ಚಂದನ್ ಮಿತ್ರ ಆರೋಪಿಸಿದ್ದಾರೆ.
ಏಳು ಹಂತದ ಲೋಕಸಭಾ ಚುನಾವಣೆಯು  ಏಪ್ರಿಲ್ 11ರಿಂದ ಪ್ರಾರಂಭವಾಗಿ ಮೇ 19ಕ್ಕೆ ಮುಕ್ತಾಯವಾಗಲಿದೆ. ಮೇ 23 ರಂದು ಮತಗಳ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com