ವಿಡಿಯೋ: ಇದು ಜಿಹಾದ್ ಅಲ್ಲ, ಜಹಲತ್; ಬಾಲಕನನ್ನು ಒತ್ತೆಯಾಳಾಗಿಸಿಕೊಂಡಿದ್ದ ಉಗ್ರರಿಗೆ ಗ್ರಾಮಸ್ಥರ ಮನವಿ

'ಇದು ಜಿಹಾದ್ ಅಲ್ಲ, ಜಹಲತ್(ವಿವೇಕವಿಲ್ಲದ ವರ್ತನೆ). ನಮ್ಮ ಹುಡುಗನನ್ನು ಬಿಟ್ಟು ಬಿಡಿ' ಎಂದು 12 ವರ್ಷದ ಬಾಲಕನನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಉಗ್ರರಿಗೆ...
ಬಾಲಕ ಆತೀಫ್
ಬಾಲಕ ಆತೀಫ್
ಶ್ರೀನಗರ: 'ಇದು  ಜಿಹಾದ್ ಅಲ್ಲ, ಜಹಲತ್(ವಿವೇಕವಿಲ್ಲದ ವರ್ತನೆ). ನಮ್ಮ ಹುಡುಗನನ್ನು ಬಿಟ್ಟು ಬಿಡಿ' ಎಂದು 12 ವರ್ಷದ ಬಾಲಕನನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಉಗ್ರರಿಗೆ ಉತ್ತರ ಕಾಶ್ಮೀರದ ಹಜಿನ್ ಗ್ರಾಮದ ಹಿರಿಯ ನಾಕರಿಕರೊಬ್ಬರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. 
ಹಜಿನ್ ಪ್ರದೇಶದ ಮಿರ್ ಮೊಹಲ್ಲಾದ ಹಿರಿಯ ವ್ಯಕ್ತಿ ಉಗ್ರರಿಗೆ ಬೇಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ನಮ್ಮ ಹುಡುಗನನ್ನು ಬಿಟ್ಟು ಬಿಡಿ ಎಂದು ಲಷ್ಚರ್-ಇ-ತೊಯಿಬಾ ಉಗ್ರರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಹಾಜಿನ್​ನಲ್ಲಿ ಹಲವು ದಿನಗಳಿಂದ ಭಯೋತ್ಪಾದನೆ, ಸುಲಿಗೆ ಕಾರ್ಯಗಳಲ್ಲಿ ತೊಡಗಿ ಕುಖ್ಯಾತನಾಗಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಅಲಿ ಹಾಗೂ ಆತನ ಸಹಚರ ಹುಬೇಬ್  ಭದ್ರತಾ ಪಡೆಗಳಿಂದ ರಕ್ಷಿಸಿಕೊಳ್ಳಲು 12 ವರ್ಷದ ಆತಿಫ್ ಹುಸೇನ್ ಒತ್ತೆಯಾಗಿರಿಸಿಕೊಂಡಿದ್ದರು. ಅತೀಫ್ ಮಿರ್ ನ್ನು ಬಿಡುಗಡೆ ಮಾಡುವಂತೆ ಕುಟುಂಬ ಸದಸ್ಯರು ನಿರಂತರವಾಗಿ ಉಗ್ರರಿಗೆ ಮನವಿ ಮಾಡಿದ್ದರು. ಮನವಿ ಬಗ್ಗದ ಉಗ್ರರು ಅತೀಫ್ ಮಿರ್ ಕತ್ತು ಸೀಳಿ ಕೊಲೆ ಮಾಡಿದ್ದರು.
ಭಯೋತ್ಪಾದಕರು ಬಾಲಕನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರು. ಆದರೆ ಕುಟುಂಬ ಸದಸ್ಯರು ಆಕೆ ತಪ್ಪಿಸಿಕೊಳ್ಳುವುದಕ್ಕೆ ಸಹಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಭಯೋತ್ಪಾದಕರು ಬಾಲಕನ ಮನೆಯವರ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೇ ಬೆದರಿಕೆ ಹಾಕಿ ಮನೆಯಲ್ಲಿ ಆಶ್ರಯ ಪಡೆದು ಬಾಲಕನನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಕುಟುಂಬ ಸದಸ್ಯರ ಕೂಗನ್ನು ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕುಟುಂಬ ಸದಸ್ಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭಯೋತ್ಪಾದಕರು ಪೊಲೀಸರು ಹಾಗೂ ಭದ್ರತಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ್ದಾರೆ.
ಭದ್ರತಾ ಪಡೆಗಳು ಉಗ್ರರನ್ನು ಎನ್ ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಎನ್ ಕೌಂಟರ್ ನಲ್ಲಿ ಹತ್ಯೆಯಾದ ಉಗ್ರರನ್ನು ಪಾಕಿಸ್ತಾನದ ಅಲಿ ಹಾಗೂ ಹುಬಾಯಿಬ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com