ಪುಲ್ವಾಮದಲ್ಲಿ ಸಿಆರ್ ಪಿಎಫ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ, ಬಾರಾಮುಲ್ಲಾದಲ್ಲಿ ಉಗ್ರರಿಂದ ಓರ್ವನ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಪುಲ್ವಾಮದಲ್ಲಿ ಸಿಆರ್ ಪಿಎಫ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದರೆ ಬಾರಾಮುಲ್ಲಾದಲ್ಲಿ ಓರ್ವ ನಾಗರಿಕನನ್ನು ಹತ್ಯೆ ಮಾಡಿದ್ದಾರೆ.

Published: 30th March 2019 12:00 PM  |   Last Updated: 30th March 2019 06:23 AM   |  A+A-


Jammu and Kashmir: Terrorists hurl grenade at CRPF post in Pulwama injuring jawan; kill civilian in Baramulla

ಪುಲ್ವಾಮದಲ್ಲಿ ಸಿಆರ್ ಪಿಎಫ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ, ಬಾರಾಮುಲ್ಲಾದಲ್ಲಿ ಉಗ್ರರಿಂದ ಓರ್ವನ ಹತ್ಯೆ

Posted By : SBV SBV
Source : Online Desk
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಪುಲ್ವಾಮದಲ್ಲಿ ಸಿಆರ್ ಪಿಎಫ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದರೆ ಬಾರಾಮುಲ್ಲಾದಲ್ಲಿ ಓರ್ವ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. 

ಪುಲ್ವಾಮದ ಎಸ್ ಬಿಐ ಶಾಖೆ ಬಳಿ ಇರುವ ಸಿಆರ್ ಪಿಎಫ್ ಪೋಸ್ಟ್ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿಯ ಬೆನ್ನಲ್ಲೇ ಪ್ರದೇಶವನ್ನು ಸುತ್ತುವರೆದಿರುವ ಸೇನೆ ಉಗ್ರರನ್ನು ಸೆದೆಬಡಿಯುವ ಕಾರ್ಯಾಚರಣೆ ಪ್ರಾರಂಭಿಸಿದೆ. 

ಇನ್ನು ಬಾರಾಮುಲ್ಲಾದ ಮುಖ್ಯ ಚೌಕದ ಬಳಿ ಉಗ್ರರು ಓರ್ವ ನಾಗರಿಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ರಾಮ್‌ಬನ್ ಜಿಲ್ಲೆಯ ಬನಿಹಾಲ್ ನಲ್ಲಿ ಸ್ಯಾಂಟ್ರೋ ಕಾರು ಸಿಆರ್ ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ರಾಮ್‌ಬನ್ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಪುಲ್ವಾಮ ಮಾದರಿಯ ವಿಫಲ ಯತ್ನ ಎಂದು ವಿಶ್ಲೇಷಿಸಲಾಗುತ್ತಿತ್ತು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp