ಆಧಾರ್‌ ಜತೆ ಪ್ಯಾನ್‌ ಲಿಂಕ್‌ ಗಡುವು 6 ತಿಂಗಳು ವಿಸ್ತರಣೆ

ಆಧಾರ್‌ ಜೊತೆ ಪ್ಯಾನ್‌ ಕಾರ್ಡ್ ಲಿಂಕ್ ಮಾಡಲು ಇದ್ದ ಮಾರ್ಚ್ 31ರ ಗಡುವನ್ನು ಕೇಂದ್ರ ಸರ್ಕಾರ ಭಾನುವಾರ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಧಾರ್‌ ಜೊತೆ ಪ್ಯಾನ್‌ ಕಾರ್ಡ್ ಲಿಂಕ್ ಮಾಡಲು ಇದ್ದ ಮಾರ್ಚ್ 31ರ ಗಡುವನ್ನು ಕೇಂದ್ರ ಸರ್ಕಾರ ಭಾನುವಾರ ಮತ್ತೆ ಆರು ತಿಂಗಳು ವಿಸ್ತರಣೆ ಮಾಡಿದೆ. 
ಈ ಮುಂಚೆ ಮಾರ್ಚ್‌ 31ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿದ ಜಾಹೀರಾತಿನಲ್ಲಿ ತಿಳಿಸಿತ್ತು. ಇದೀಗ ಈ ಗಡುವನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ.
ಆಧಾರ್‌ ಜೊತೆ ಪ್ಯಾನ್‌ ಜೋಡಣೆ ಮಾಡುವತನಕ ತೆರಿಗೆ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 
ಈ ಮೊದಲು ಪ್ಯಾನ್‌-ಆಧಾರ್‌ ಜೋಡಣೆಗೆ 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ಹಲವು ಬಾರಿ ವಿಸ್ತರಿಸಿ ಕೊನೆಗೆ 2019ರ ಮಾರ್ಚ್‌ 31 ರೊಳಗೆ ಆಧಾರ್‌-ಪ್ಯಾನ್‌ ಕಾರ್ಡ್ ಲಿಂಕ್‌ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಈಗ ಮತ್ತೆ ಅದನ್ನು ವಿಸ್ತರಣೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com