ಮಸೂದ್ ಅಜರ್ ಜಾಗತಿಕ ಉಗ್ರ: ಇದು ಆರಂಭವಷ್ಟೇ ಇನ್ನೂ ಏನಾಗುತ್ತೆ ಕಾದು ನೋಡಿ: ಮೋದಿ

ಮಸೂದ್ ಅಜರ್ ನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಭಾರತಕ್ಕೆ ಸಂದ ಬೃಹತ್ ಗೆಲುವು ಎಂದು ಬಣ್ಣಿಸಿದ್ದಾರೆ.

Published: 02nd May 2019 12:00 PM  |   Last Updated: 02nd May 2019 09:44 AM   |  A+A-


Big victory: PM on Azhar's listing as global terrorist by UN

ಮಸೂದ್ ಅಜರ್ ಜಾಗತಿಕ ಉಗ್ರ: ಇದು ಆರಂಭವಷ್ಟೇ ಇನ್ನೂ ಏನಾಗುತ್ತೆ ಕಾದು ನೋಡಿ: ಮೋದಿ

Posted By : SBV SBV
Source : The New Indian Express
ಜೈಪುರ: ಮಸೂದ್ ಅಜರ್ ನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಭಾರತಕ್ಕೆ ಸಂದ ಬೃಹತ್ ಗೆಲುವು ಎಂದು ಬಣ್ಣಿಸಿದ್ದಾರೆ.
 
ಭಯೋತ್ಪಾದನೆಯನ್ನು ಬುಡಸಹಿತ ನಿರ್ನಾಮ ಮಾಡುವುದರಲ್ಲಿ ಭಾರತಕ್ಕೆ ಬಹುದೊಡ್ಡ ಯಶಸ್ಸು ಲಭಿಸಿದೆ. ನಮ್ಮ ದೇಶದ ಧ್ವನಿಯನ್ನು ಜಾಗತಿಕವಾಗಿ ಯಾರೂ ನಿರ್ಲಕ್ಷಿಸಲಾಗದು ಎಂಬ ಸಂದೇಶ ರವಾನೆಯಾಗಿದೆ ಎಂದು ಮೋದಿ ಹೇಳಿದ್ದಾರೆ. 

ಮಸೂದ್ ಅಜರ್ ನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಒಮ್ಮತದಿಂದ ಘೋಷಿಸಲಾಯಿತು ಎಂಬುದು ಸಮಾಧಾನಕರ ವಿಷಯ, ಆಗದೇ ಇರುವುದಕ್ಕಿಂತ ವಿಳಂಬವಾಗಿ ಆಗಿದೆ ಎಂದು ಮೋದಿ ಚುನಾವಣಾ ಸಮಾವೇಶದಲ್ಲಿ ಹೆಳಿದ್ದಾರೆ. 

ಈ ಹಿಂದಿನ ರಿಮೋಟ್ ಕಂಟ್ರೋಲ್ ಸರ್ಕಾರದಲ್ಲಿ ಪ್ರಧಾನಿ ಧ್ವನಿಯೇ ಕೇಳುತ್ತಿರಲಿಲ್ಲ, ಆದರೆ ಈಗ 130 ಕೋಟಿ ಭಾರತೀಯರ ಧ್ವನಿ, ವಿಶ್ವಸಂಸ್ಥೆಯಲ್ಲೂ ಪರಿಣಾಮ ಬೀರುತ್ತಿದೆ ಎಂದಿರುವ ಮೋದಿ ಇದು ಆರಂಭವಷ್ಟೇ ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡಿ ಎಂದು ಕುತೂಹಲ ಮೂಡಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp