36 ವರ್ಷಗಳ ಸೇವೆಯ ನಂತರ ಐಎನ್ಎಸ್ ರಂಜಿತ್ ಕಾರ್ಯಾಚರಣೆ ಸ್ಥಗಿತ

ರಷ್ಯನ್ ಮೂಲದ ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ರಂಜಿತ್ ಇನ್ನು ಮುಂದೆ ಕಾರ್ಯಾಚರಣೆ ನಡೆಸಲ್ಲ
ಐಎನ್ಎಸ್ ರಂಜಿತ್
ಐಎನ್ಎಸ್ ರಂಜಿತ್
ನವದೆಹಲಿ: ರಷ್ಯನ್ ಮೂಲದ ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ರಂಜಿತ್ ಇನ್ನು ಮುಂದೆ ಕಾರ್ಯಾಚರಣೆ ನಡೆಸಲ್ಲ.  36 ವರ್ಷಗಳ ಸುದೀರ್ಘ ಸೇವೆಯ ನಂತರ ಸೋಮವಾರದಿಂದ ಇದರ ಕಾರ್ಯಾಚರಣೆಗೆ ಸ್ಥಗಿತಗೊಳ್ಲಲಿದೆ.
ಭಾರತೀಯ ನೌಕಾ ಇತಿಹಾಸದಲ್ಲಿ ಅತ್ಯುತ್ತಮವಾದ ಸಮರ ನೌಕೆಯೊಂದರ ಅಧ್ಯಾಯ ಇದರೊಡನೆ ಅಂತ್ಯವಾಗಲಿದೆ.ರಜಪೂತ್ ವರ್ಗದ ಅವಿಧ್ವಂಸಕ ನೌಕೆಗಳಲ್ಲಿ ಇದು ಮೊದಲನೆಯದಾಗಿದೆ.
ರಂಜಿತ್ ಮೂಲತಃ ಕಾಶಿನ್ ವರ್ಗದ ವಿಧ್ವಂಸಕನಾಗಿದ್ದು, ಅಂಡಮಾನ್ ಮತ್ತು ನಿಕೋಬಾರ್ ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದೇವೇಂದ್ರ ಕುಮಾರ್ ಜೋಶಿ ವಿಶಾಖಪಟ್ಟಣಂ ನ ನೌಕಾ ಡಾಕ್ ಯಾರ್ಡ್ ನಲ್ಲಿ ಇದನ್ನು ಕಡೆಯ ಬರಿಗೆ ಚಲಾಯಿಸುವವರಿದ್ದಾರೆ.
ಈ ವಿಧ್ವಂಸಕ ನೌಕೆಯನ್ನು ಯಾರ್ಡ್ 2203 ನಂತೆ ಉಕ್ರೇನಿನ ನಿಕೋಲೇವ್ ಮ್ಯೂನಾರ್ಡ್ಸ್ ಶಿಪ್ ಯಾರ್ಡ್ ನಲ್ಲಿ 1970 ರ ಉತ್ತರಾರ್ಧದಲ್ಲಿ ನಿರ್ಮಿಸಲಾಗಿತ್ತು. "ಲವ್ಕಿ" ಎಂಬುದು ಇದರ ಮೂಲ ಹೆಸರಾಗಿದ್ದು ಈ ಪದ ಅಗೈಲ್ ಎಂಬ ಅರ್ಥವನ್ನು ಸೂಚಿಸುತ್ತದೆ. 
ಸೆಪ್ಟೆಂಬರ್ 1983 ರಲ್ಲಿ ಕ್ಯಾಪ್ಟನ್ ವಿಷ್ಣು ಭಾಗವತ್ ಅವರ ಸಮ್ಮುಖದಲ್ಲಿ ಭಾರತೀಯ ನೌಕಾಪಡೆಗೆ ಇದನ್ನು ನೇಮಕ ಮಾಡಲಾಯಿತು, ಇವರು 1996 ರಿಂದ 1998 ರವರೆಗೆ ನೌಕಾ ಮುಖ್ಯಸ್ಥರಾದರು.
ರಜಪೂತ್ ವರ್ಗದ ವಿಧ್ವಂಸಕವನ್ನು ಈ ಮುನ್ನ  ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಉಡಾವಣೆಗಾಗಿ ಬಳಸಲಾಗುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com