ದೇಶಾದ್ಯಂತ ಇಂದು ನೀಟ್ ಪರೀಕ್ಷೆ ; ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸುವ ಅಭ್ಯರ್ಥಿಗಳ ಪ್ರವೇಶಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸುವ ಅಭ್ಯರ್ಥಿಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ( ನೀಟ್‌ ) 2019 ಪರೀಕ್ಷೆ ಭಾನುವಾರ ನಡೆಯುತ್ತಿದೆ. ಈ ವರ್ಷ 15.19 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಮಹಿಳೆಯರ ಡ್ರೆಸ್ ಕೋಡ್ : ಅಭ್ಯರ್ಥಿಗಳು ತಿಳಿ ಬಣ್ಣಗಳ ಬಟ್ಟೆಗಳನ್ನು ಧರಿಸಬೇಕು ಹಾಗೂ ಪೂರ್ತಿ ತೋಳಿನ ಬಟ್ಟೆಗಳನ್ನು ಧರಿಸಬಾರದು. ಕಸೂತಿ, ಹೂವುಗಳು, ಗುಂಡಿಗಳು ಇರುವಂತಹ ಬಟ್ಟೆಗಳನ್ನು ಧರಿಸುವಂತಿಲ್ಲ. ಅರ್ಧ ತೋಳಿನ ಉಡುಪು ಧರಿಸಬೇಕು.
ಪಾದರಕ್ಷೆ: ಎನ್‌ಟಿಎ ಪರೀಕ್ಷೆಯ ನಿಯಮಾವಳಿಗಳಂತೆ ನೀಟ್‌ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಒಳಗೆ ಶೂ ಧರಿಸುವಂತಿಲ್ಲ. ಸ್ಯಾಂಡಲ್ಸ್, ಚಪ್ಪಲಿಗಳನ್ನು ಅಥವಾ ಕಡಿಮೆ ಹೀಲ್ಸ್ ಇರುವ ಚಪ್ಪಲಿಗಳನ್ನು ಧರಿಸಬೇಕು. ಕಿವಿಯೋಲೆ, ರಿಂಗ್, ಪೆಂಡೆಂಟ್‌ಗಳು, ಮೂಗುತಿ, ನೆಕ್ಲೇಸ್ ಅಥವಾ ಇತರೆ ಲೋಹದ ವಸ್ತುಗಳನ್ನುಹಾಕುವಂತಿಲ್ಲ.
ಪುರುಷ ಅಭ್ಯರ್ಥಿಗಳಿಗೆ ಡ್ರೆಸ್‌ಕೋಡ್:ಪುರುಷ ಅಭ್ಯರ್ಥಿಗಳು ಸರಳ ಶರ್ಟ್ ಅಥವಾ ಟಿ - ಶರ್ಟ್ ಧರಿಸಬೇಕು. ಅದರಲ್ಲಿ ಜಿಪ್‌, ಪಾಕೆಟ್‌, ದೊಡ್ಡ ಬಟನ್‌ಗಳು ಅಥವಾ ಯಾವುದೇ ವಿಸ್ತಾರವಾದ ಕಸೂತಿ ಇರಬಾರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com