ವೋಕ್ಸ್ ವ್ಯಾಗನ್ ಗೆ 500 ಕೋಟಿ ರು. ಎನ್ ಜಿಟಿ ದಂಡ: ಒತ್ತಾಯದ ಕ್ರಮ ಇಲ್ಲ ಎಂದ 'ಸುಪ್ರೀಂ'

ಮಾಲಿನ್ಯ ತಪಾಸಣೆಯ ಮಾನದಂಡ (ಎಮಿಷನ್ ಟೆಸ್ಟ್)ದ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿದ್ದ ವೋಕ್ಸ್ ವ್ಯಾಗನ್ ವಿರುದ್ಧ ಒತ್ತಾಯ ಪೂರ್ವಕ ಕ್ರಮ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಮಿಷನ್ ಟೆಸ್ಟ್ ಎಡವಟ್ಟು: ವೋಕ್ಸ್ ವ್ಯಾಗನ್ ವಿರುದ್ಧ ಒತ್ತಾಯ ಪೂರ್ವಕ ಕ್ರಮ ಇಲ್ಲ-ಸುಪ್ರೀಂ
ಎಮಿಷನ್ ಟೆಸ್ಟ್ ಎಡವಟ್ಟು: ವೋಕ್ಸ್ ವ್ಯಾಗನ್ ವಿರುದ್ಧ ಒತ್ತಾಯ ಪೂರ್ವಕ ಕ್ರಮ ಇಲ್ಲ-ಸುಪ್ರೀಂ
ನವದೆಹಲಿ: ಮಾಲಿನ್ಯ ತಪಾಸಣೆಯ ಮಾನದಂಡ (ಎಮಿಷನ್ ಟೆಸ್ಟ್)ದ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿದ್ದ ವೋಕ್ಸ್ ವ್ಯಾಗನ್ ವಿರುದ್ಧ ಒತ್ತಾಯ ಪೂರ್ವಕ ಕ್ರಮ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಮಾಲಿನ್ಯವನ್ನು ಮರೆಮಾಚಲು ಡೀಸೆಲ್ ಕಾರುಗಳಲ್ಲಿ ವಿಶೇಷ ರೀತಿಯ ಸಾಧನ ಬಳಸಿ, ಪರಿಸರಕ್ಕೆ ಹಾನಿಯುಂಟುಮಾಡಿದ್ದ ವೋಕ್ಸ್ ವ್ಯಾಗನ್ ಸಂಸ್ಥೆಗೆ  ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 500 ಕೋಟಿ ರೂ ದಂಡವನ್ನು ಪಾವತಿಸಲು ಆದೇಶ ನೀಡಿತ್ತು. 
ಎಸ್ಎ ಬಾಬ್ಡೇ ಅವರಿದ್ದ ನ್ಯಾಯಪೀಠ, ಎನ್ ಜಿಟಿ ವಿಧಿಸಿದ್ದ ದಂಡದ ಆದೇಶಕ್ಕೆ ತಡೆ ನೀಡಿದೆ. ಮಾ.07 ರಂದು 500 ಕೋಟಿ ರೂಪಾಯಿ ದಂಡಾ ವಿಧಿಸಿದ್ದ ಎನ್ ಜಿಟಿ ವೋಕ್ಸ್ ವ್ಯಾಗನ್ ಸಂಸ್ಥೆಗೆ ಒಟ್ಟು ಮೊತ್ತವನ್ನು 2 ತಿಂಗಳಲ್ಲಿ ಪೂರ್ತಿ ಪಾವತಿಸಬೇಕೆಂದು ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com