ರಂಜಾನ್ ವೇಳೆ ಮತದಾನದ ಸಮಯ ಬದಲಾವಣೆ ಕೋರಿದ್ದ ಅರ್ಜಿ ವಜಾ

ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯ ಮತದಾನ ಸಮಯವನ್ನು ಬದಲಿಸಬೇಕು ಎಂದು ಕೋರಿ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯ ಮತದಾನ ಸಮಯವನ್ನು ಬದಲಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ಮತದಾನ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ನಡೆಸುವಂತೆ ಪ್ರಕಟಣೆ ಹೊರಡಿಸಿತ್ತು. ಆದರೆ ರಮ್ಜಾನ್ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಅಂತಿಮ ಹಂತದ (ಮೇ 19) ಮತದಾನದ ಸಮಯವನ್ನು ಬೆಳಗ್ಗೆ 5.30ರಿಂದ ಅಥವಾ 6ಗಂಟೆಯಿಂದ ಆರಂಭಿಸಬೇಕೆಂದು ಕೋರಿ ವಕೀಲ ಮೊಹಮ್ಮದ್ ನಿಜಾಮುದ್ದೀನ್ ಪಾಶಾ ಅರ್ಜಿ ಸಲ್ಲಿಸಿದ್ದರು.
ಇದಕ್ಕೂ ಮುನ್ನ ಸುಪ್ರೀಂ ಪೀಠ, ಲೋಕಸಭಾ ಚುನಾವಣೆಯ ಬಾಕಿ ಇರುವ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಬೆಳಗ್ಗೆ 7ಗಂಟೆ ಬದಲು ಬೆಳಗ್ಗೆ 5ಗಂಟೆಗೆ ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಆದರೆ ಚುನಾವಣಾ ಆಯೋಗ ಸಮಯ ಬದಲಾವಣೆ ಅಸಾಧ್ಯ ಎಂದು ಅಫಿಡವಿತ್ ಸಲ್ಲಿಸಿತ್ತು.
ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ನೇತೃತ್ವದ ರಜಾಕಾಲದ ಪೀಠ ಸಮಯ ಬದಲಾವಣೆಯ ಅರ್ಜಿಯನ್ನು ವಜಾಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com