ಗುವಾಹಟಿ: ಮಾಲ್ ಹೊರಗಡೆ ಸ್ಫೋಟ, 12 ಮಂದಿಗೆ ಗಾಯ

ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿಂದು ಸ್ಫೋಟ ಸಂಭವಿಸಿದೆ. ಗುವಾಹಟಿಯ ಹೃದಯಭಾಗದಲ್ಲಿದ್ದ ಮಾಲ್ ವೊಂದರ ಹೊರಗಡೆ ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Published: 15th May 2019 12:00 PM  |   Last Updated: 16th May 2019 01:06 AM   |  A+A-


Blast Spot

ಸ್ಫೋಟ ಸಂಭವಿಸಿದ ಪ್ರದೇಶ

Posted By : ABN ABN
Source : PTI
ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ  ಸ್ಫೋಟ ಸಂಭವಿಸಿದೆ. ಗುವಾಹಟಿಯ ಹೃದಯಭಾಗದಲ್ಲಿದ್ದ ಮಾಲ್ ವೊಂದರ ಹೊರಗಡೆ ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗುವಾಹಟಿಯ ಝೂ ರಸ್ತೆಯಲ್ಲಿರುವ ಮಾಲ್ ವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ
ಗಾಯಗೊಂಡವರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ಆದಾಗ್ಯೂ, ಯಾವುದೇ ಪ್ರಾಣಪಾಯ ಉಂಟಾಗಿಲ್ಲ. ಗಾಯಾಳುಗಳನ್ನು ಗುವಾಹಟಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 8 ಗಂಟೆ ಸುಮಾರಿನಲ್ಲಿ ಸ್ಪೋಟ ಸಂಭವಿಸಿದ್ದು,ತನಿಖೆ ಮುಂದುವರೆದಿದೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ತಿಳಿಸಿದ್ದಾರೆ.ಬೈಕ್ ನಲ್ಲಿ ಬಂದು ಇಬ್ಬರು ಅಪರಿಚಿತರು ಗ್ರೇನೆಡ್ ಸ್ಪೋಟ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp