ವಿಐಪಿ ಸೌಲಭ್ಯ ಕುರಿತು ಗೇಲಿ ಮಾಡುವ ಪ್ರಧಾನಿಗಳ ಸೋದರನೇ ಈಗ ಬೆಂಗಾವಲು ವಾಹನ ಬಯಸುತ್ತಿದ್ದಾರೆ: ರಾಬರ್ಟ್ ವಾದ್ರಾ

ಯಾರು ಗಾಜಿನ ಮನೆಯಲ್ಲಿ ವಾಸವಾಗಿದ್ದಾರೋ ಅವರು ಬೇರೆಯವರ ಮನೆ ಮೇಲೆ ಕಲ್ಲೆಸೆಯಬಾರದು, ಪ್ರಧಾನಿ ನರೇಂದ್ರ ಮೋದಿ ಬೇರೆಯವರು ಬಳಸುವ ವಿಐಪಿ ಸೌಕರ್ಯವನ್ನು ಅಪಹಾಸ್ಯ ಮಾಡುತ್ತಾರೆ.

Published: 15th May 2019 12:00 PM  |   Last Updated: 15th May 2019 06:27 AM   |  A+A-


Robert Vadra

ರಾಬರ್ಟ್ ವಾದ್ರಾ

Posted By : RHN RHN
Source : ANI
ನವದೆಹಲಿ: ಯಾರು ಗಾಜಿನ ಮನೆಯಲ್ಲಿ ವಾಸವಾಗಿದ್ದಾರೋ ಅವರು ಬೇರೆಯವರ ಮನೆ ಮೇಲೆ ಕಲ್ಲೆಸೆಯಬಾರದು, ಪ್ರಧಾನಿ ನರೇಂದ್ರ ಮೋದಿ ಬೇರೆಯವರು ಬಳಸುವ ವಿಐಪಿ ಸೌಕರ್ಯವನ್ನು ಅಪಹಾಸ್ಯ ಮಾಡುತ್ತಾರೆ. ಆದರೆ ಅವರ ತಮ್ಮ ಮಾತ್ರ ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸಲು ಪೋಲೀಸ್ ರಕ್ಷಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಟೀಕಿಸಿದ್ದಾರೆ.

ವಾದ್ರಾ ಫೇಸ್ ಬುಕ್ ಪೋಸ್ಟ್ ನಲ್ಲಿ ಮೋದಿಯವರನ್ನು ಟೀಕಿಸಿದ್ದು "ವಿಐಪಿ ಸೌಲಭ್ಯದ ಕುರಿತು ಎಲ್ಲರಿಗೆ ಗೇಲಿ ಮಾಡುವ ಪಿಎಂ ನರೇಂದ್ರ ಮೋದಿ ಅವರ ಪ್ರೀತಿಯ ತಮ್ಮನೇ ಇಂದು ತಮಗೆ ಬೆಂಗಾವಲು ವಾಹನ ನಿಡಬೇಕೆಂದು ಬೇಡಿಕೆ ಇಟ್ಟು ಧರಣಿ ನಡೆಸಿದ್ದಾರೆ. ಇದೇ ಅಚ್ಚೇದಿನ್ ಹೌದೆ?" ಎಂದು ಕೇಳಿದ್ದಾರೆ.

ಪ್ರಧಾನಿ ಮೋದಿಯವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ರಾಜಸ್ಥಾನದ ಪೋಲೀಸ್ ಠಾಣೆ ಎದುರು ಬೆಂಗಾವಲು ವಾಹನಕ್ಕೆ ಬೇಡಿಕೆ ಇಟ್ಟು ಧರಣಿ ನಡೆಸಿದ್ದಾರೆ ಎಂಬ ವರದಿಗಳು ಪ್ರಸಾರವಾದ ಬಳಿಕ ವಾದ್ರಾ ಈ ಪೋಸ್ಟ್ ಬರೆದುಕೊಂಡಿದ್ದಾರೆ.

ಇದೇ ವೇಳೆ ರಾಜಸ್ಥಾನ ಸರ್ಕಾರ ಮೋದಿ ಸೋದರರಿಗೆ ಪ್ರತ್ಯೇಕ ಬೆಂಗಾವಲು ವಾಹನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಹ್ಲಾದ್ ಮೋದಿ ರಾಜಸ್ಥಾನ ಜೈಪುರ- ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾಗ್ರು ಪೋಲೀಸ್ ಠಾಣೆ ಎದುರು ಧರಣಿ ಕೈಗೊಂಡಿದ್ದಾರೆ.

ವಾದ್ರಾ ಅವರಿಗೆ ಈ ಹಿಂದಿನ ದಿನಗಳಿಗಿಂತ ಈಗ ಅರ್ಧದಷ್ಟು ಭದ್ರತೆ ಕಡಿಮೆ ಮಾಡಲಾಗಿದೆ. ಆದರೆ ಅವರು ಸರ್ಕಾರದ ಈ ತೀರ್ಮಾನವನ್ನು ಹೃತ್ಪೂರ್ವಕ ಒಪ್ಪಿಕೊಂಡಿದ್ದಾರೆ.

"ಈಗ ಪ್ರಧಾನಿ ತನ್ನ ಸೋದರನೇ ಬೆಂಗಾವಲು ವಾಹನಬಯಸಿ ಧರಣಿ ಕುಳಿತಾಗ ಸನ್ನಿವೇಶವನ್ನು ಯಾವ ರೀತಿ ಬಗೆಹರಿಸುತಾರೆ ನೋಡೋಣ" ವಾದ್ರಾ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp