ಪ್ರಧಾನಿ ಮೋದಿ ದ್ಯಾನಕ್ಕೆ ಕುಳಿತಿದ್ದ ಕೇದಾರನಾಥ್ ಗುಹೆಯ ವಿಶೇಷತೆಗಳೇನು ಗೊತ್ತೆ?

ಲೋಕಸಭೆ ಚುನಾವಣೆ ಕಡೇ ಹಂತದ ಮತದಾನದ ಮುನ್ನಾ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಪ್ರಸಿದ್ದ ತೀರ್ಥಕ್ಷೇತ್ರ ಕೇದಾರನಾಥಕ್ಕೆ ತೆರಳಿ ಅಲ್ಲಿನ ಗುಹೆಯೊಂದರಲ್ಲಿ ರಾತ್ರಿಯಿಡೀ ದ್ಯಾನ ಮಾಡಿದ್ದರು.
ಪ್ರಧಾನಿ ಮೋದಿ ದ್ಯಾನಕ್ಕೆ ಕುಳಿತಿದ್ದ ಗುಹೆಯ ವಿಶೇಷತೆಗಳೇನು ಗೊತ್ತೆ?
ಪ್ರಧಾನಿ ಮೋದಿ ದ್ಯಾನಕ್ಕೆ ಕುಳಿತಿದ್ದ ಗುಹೆಯ ವಿಶೇಷತೆಗಳೇನು ಗೊತ್ತೆ?
ಡೆಹ್ರಾಡೂನ್: ಲೋಕಸಭೆ ಚುನಾವಣೆ ಕಡೇ ಹಂತದ ಮತದಾನದ ಮುನ್ನಾ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಪ್ರಸಿದ್ದ ತೀರ್ಥಕ್ಷೇತ್ರ ಕೇದಾರನಾಥಕ್ಕೆ ತೆರಳಿ ಅಲ್ಲಿನ ಗುಹೆಯೊಂದರಲ್ಲಿ ರಾತ್ರಿಯಿಡೀ ದ್ಯಾನ ಮಾಡಿದ್ದರು. ಹೀಗೆ ಪ್ರಧಾನಿ ಮೋದಿ ದ್ಯಾನ ಮಾಡಿದ್ದ ಆ ಗುಹೆ ಹೇಗಿದೆ, ಅದರ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ..
ಪ್ರಧಾನಿ ನರೇಂದ್ರ ಮೋದಿ ಉತ್ತರಖಂಡದ ಕೇದಾರನಾಥದಲ್ಲಿ ಧ್ಯಾನ ಮಾಡಿದ್ದ ಗುಹೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಪ್ರತಿ ದಿನವೊಂದಕ್ಕೆ 990 ರೂ ಬಾಡಿಗೆಗಾಗಿ ನೀಡಲಾಗಿತ್ತದೆ.
ಗೃಹ್ವಾಲ್ ಮಂಡಲ್ ವಿಕಾಸ್ ನಿಗಮ್ ಆಡಳಿತದ ಈ ಗುಹೆಯನ್ನು ಕಳೆದ ವರ್ಷ ನಿರ್ಮಾಣ ಮಾಡಲಾಗಿದ್ದು ದ್ಯಾನಕ್ಕೆ ಯೋಗ್ಯವಾಗಿರುವ ವಾತಾವರಣ ಕಲ್ಪಿಸಲಾಗಿದೆ. ಜತೆಗೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದೊಡನೆ ಗುಹೆ ಬಾಡಿಗೆ ದರವನ್ನು ಕಡಿತ ಮಾಡಲಾಗಿದೆ.
ಪ್ರಧಾನಿ ಮೋದಿಯವರು ದ್ಯಾನಾಸಕ್ತ ಪ್ರವಾಸಿಗರಿಗೆ ಯೋಗ್ಯವಾಗುವಂತೆ ಗುಹೆಗಳ ನಿರ್ಮಾಣದಕುರಿತು ವಿವರಿಸಿದ ಬಳಿಕ ಈ ವಿಶೇಷ ಗುಹೆ ನಿರ್ಮಾಣವಾಗಿದೆ.ಕೇದಾರನಾಥ ದೇವಾಲಯದಿಂದ ಸುಮಾರು ಒಂದು ಕಿಮೀ ದೂರವಿರುವ ಈ ಗುಹೆಯನ್ನು ರುದ್ರದ್ಯಾನ ಗುಹಾ ಎಂದು ಕರೆಯಲಾಗುತ್ತದೆ.
ಪ್ರಾರಂಭದಲ್ಲಿ ಇಂತಹಾ ಗುಹೆಯೂಂದರ ದಿನದ ಬಾಡಿಗೆಯನ್ನು 3000 ರು. ಎಂದು ನಿಗದಿಗೊಳಿಸಿದ್ದದ್ದನ್ನು ಮುಂದಿನ ದಿನಗಳಲ್ಲಿ 990 ರು. ಗೆ ಇಳಿಕೆ ಮಾಡಲಾಗಿದೆ. ಕಳೆದ ವರ್ಷ ಗುಹೆ ನಿರ್ಮಾಣವಾದಂದಿನಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿರಲಿಲ್ಲ. ಮೊದಲನೆಯದಾಗಿ ಗುಹೆಯು ಪ್ರವಾಸಿಗರಿಗೆ ತೆರೆಯಲ್ಪಟ್ಟಂದಿನಿಂಡಲೂ ಈ ಪ್ರದೇಶದಲ್ಲಿ ಅತ್ಯಂತ ಶೀತಲ ವಾತಾವರಣವಿತ್ತು. ಹಾಗೆಯೇ ಬಾಡಿಗೆ ಶುಲ್ಕ ಸಹ ದುಬಾರಿಯಾಗಿತ್ತು ಎನ್ನುವುದನ್ನು ನಾವು ಅರಿತೆವು. ಹೀಗಾಗಿ ಈಗ ಬಾಡಿಗೆಯನ್ನು ಬಹುಮಟ್ಟಿಗೆ ಕಡಿತ ಮಾಡಿ ಪ್ರವಾಸಿಗರ ಅನುಕೂಲತೆಗೆ ಗಮನ ಹರಿಸಿದ್ದೇವೆ ಎಂದು ಜಿಎಂವಿಎನ್ ನ ಜನರಲ್ ಮ್ಯಾನೇಜರ್ ಬಿಎಲ್ ರಾಣಾ ಹೇಳಿದ್ದಾರೆ.
ಇನ್ನು ಇದಕ್ಕೆ ಮುನ್ನ ಪ್ರವಾಸಿಗರು ಈ ಗುಹೆಯನ್ನು ಬಾಡಿಗೆಗೆ ಪಡೆಯಬಯಸಿದ್ದಾದರೆ ಅವರು ಕನಿಷ್ಟ ಮೂರು ದಿನಗಳ ಕಾಲ ಬಾಡಿಗೆ ಪಡೆಯಲೇ ಬೇಕೆಂಬ ಷರತ್ತು ಹಾಕಲಾಗಿತ್ತು. ಆದರೆ ಈಗ ನಿಗಮವು ಈ ಷರತ್ತ್ನ್ನು ಕೈಬಿಟ್ಟಿದೆ. ಗುಹೆಯ ಆನ್ ಲೈನ್ ಬುಕ್ಕಿಂಗ್ ಸೈಟ್ ನಲ್ಲಿ ಮೂರು ದಿನಗಳ ಕಾಲದ ಬುಕ್ಕಿಂಗ್ ಆಯ್ಕೆಯನ್ನು ಅಳಿಸಿ ಹಾಕಲಾಗಿದೆ.
ವಿದ್ಯುತ್, ಕುಡಿಯುವ ನೀರಿ, ವಾಶ್ ರೂಂ ಸೌಲಭ್ಯ ಹೊಂದಿರುವ ಈ ಗುಹೆಯ ಹೊರಭಾಗ ಕಲ್ಲುಗಳಿಂದ ಮಾಡಲ್ಪಟ್ಟಿದ್ದು ಮರದ ಬಾಗಿಲನ್ನು ಅಳವಡಿಸಲಾಗಿದೆ.ಅಲ್ಲದೆ ಪ್ರವಾಸಿಗರು ಬಯಸಿದ ವೇಳೆಯಲ್ಲಿ ದಿನಕ್ಕೆರಡು ಬಾರಿ ಊಟ, ಉಪಹಾರ, ಚಹಾ ಸರಬರಾಜು ಸೇವೆಯನ್ನು ನಿಗಮವು ಒದಗಿಸುತ್ತದೆ.
ಅಲ್ಲದೆ ಗುಹೆಯಲಿ  24X7  ತುರ್ತು ಕರೆಗೆ ಅನುಕೂಲವಾಗುವಂತೆ ಕಾಲ್ ಬೆಲ್ ಅಳವಡಿಸಲಾಗಿದೆ.
ಗುಹೆ ಜನಸಂದಣಿ ಪ್ರದೇಶದಿಂದ ದೂರದಲ್ಲಿದೆ. ಇದು ದ್ಯಾನಕ್ಕೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುತ್ತದೆ ಎಂದು ನಿಗಮ ಭಾವಿಸಿದ್ದು ಗುಹೆಗೆ ಒಮ್ಮೆಗೆ ಒಬ್ಬ ಪ್ರವಾಸಿಗ ಮಾತ್ರವೇ ಬಾಡಿಗೆಗೆ ಪಡೆಯಬಹುದಾಗಿದೆ. ಇನ್ನು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಇಲ್ಲಿ ದೂರವಾಣಿ ಸಂಪರ್ಕವೂ ಇದೆ, ಸಿಸಿಟಿವಿ ಸಹ ಅಳವಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com