ಬದರೀನಾಥ್ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ, ವಿಶೇಷ ಪೂಜೆ

ಎರಡು ದಿನಗಳ ಕಾಲ ಉತ್ತರಖಂಡ್ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಸಿದ್ಧ ಪುಣ್ಯ ಕ್ಷೇತ್ರ ಬದರೀನಾಥ್ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಉತ್ತರಖಂಡ್ : ಎರಡು ದಿನಗಳ ಕಾಲ ಉತ್ತರಖಂಡ್ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಸಿದ್ಧ ಪುಣ್ಯ ಕ್ಷೇತ್ರ ಬದರೀನಾಥ್ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಹಿಮಾಲಯದ ತಪ್ಪಲಿನ ಕೇದಾರಾನಾಥ ದೇವಾಲಯದಲ್ಲಿ 20 ಗಂಟೆ ಕಳೆದ ಬಳಿಕ ಬದರೀನಾಥ್ ದೇವಾಲಯಕ್ಕೆ ಮೋದಿ ಭೇಟಿ ನೀಡಿದ್ದಾರೆ.

ಉತ್ತರ ಖಂಡ್ ರಾಜ್ಯದ ಚಾರ್ ಧಾಮ್  ಧಾರ್ಮಿಕ ಕೇಂದ್ರವಾಗಿರುವ ವಿಷ್ಣುವಿನ ದೇವಾಲಯದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬದರೀನಾಥ್ ದೇವಾಲದಲ್ಲಿ ಮೋದಿ 20 ನಿಮಿಷಗಳ ಕಾಲ ವಿಶೇಷ ಪೂಜೆ ಸಲ್ಲಿಸಿದರು, ದೇವಾಲಯದ ಆರ್ಚಕರು ಬೋಜ್ ಪತ್ರದಿಂದ ಮೋದಿ ಅವರನ್ನು ಆಶೀರ್ವಾದಿಸಿದರು ಎಂದು ಬದರೀನಾಥ್, ಕೇದಾರಾನಾಥ್ ದೇವಾಲಯದ ಸಮಿತಿ ಮುಖ್ಯಸ್ಥ ಮೋಹನ್ ಪ್ರಸಾದ್ ತಾಪ್ಲಿಯಾಲ್ ಹೇಳಿದ್ದಾರೆ.

ಮೋದಿ ದೇಗುಲದ ಒಳಭಾಗದಲ್ಲಿ ನಡೆದಾಡಿದ್ದು, ಅಲ್ಲಿಗೆ ಬಂದಿದ್ದ ಭಕ್ತಾಧಿಗಳು ಹಾಗೂ ಸ್ಥಳೀಯರ ಕೈ ಕುಲುಕಿದರು. ದೇವಾಲಯದ ಹೊರಗಡೆ ಕಾಯುತ್ತಿದ್ದ ಭಕ್ತಾಧಿಗಳನ್ನು ಮೋದಿ ಭೇಟಿ ಮಾಡಿ ಮಾತನಾಡಿಸಿದರು ಎಂದು ಅವರು ತಿಳಿಸಿದ್ದಾರೆ.

ಬದರೀನಾಥ್ ದೇವಾಲಯದಲ್ಲಿ ಟೆಲಿ ಕಮ್ಯೂನಿಕೇಷನ್ ಸೇವೆ ವಿಸ್ತರಣೆ ಹಾಗೂ ದೇಗುಲದ ಸಂಕೀರ್ಣ ವಿಸ್ತರಣದ ಅಗತ್ಯತೆ ಬಗ್ಗೆ ಮನವಿಯನ್ನು ಪ್ರಧಾನಿ ಮೋದಿಗೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ನೀಡಿದ್ದಾರೆ. ದೇಗುಲಕ್ಕೆ ಬರುವ ಭಕ್ತಾಧಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವಂತೆ ಮೋದಿ ಹೇಳಿದ್ದಾರೆ ಎಂದು ಮೋಹನ್ ಪ್ರಸಾದ್ ತಾಪ್ಲಿಯಾಲ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com