ಸ್ಮೃತಿ ಇರಾನಿ ಆಪ್ತನ ಹತ್ಯೆ: ಇಬ್ಬರು ಶಂಕಿತರು ಪೋಲೀಸ್ ವಶಕ್ಕೆ

ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ವಿರುದ್ಧ ಜಯಭೇರಿ ಬಾರಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಪ್ತನ ಕೊಲೆಗೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

Published: 26th May 2019 12:00 PM  |   Last Updated: 26th May 2019 01:17 AM   |  A+A-


Amethi: Suspects in murder of Smriti Irani's aide held by police

ಸ್ಮೃತಿ ಇರಾನಿ ಆಪ್ತನ ಹತ್ಯೆ: ಇಬ್ಬರು ಶಂಕಿತರು ಪೋಲೀಸ್ ವಶಕ್ಕೆ

Posted By : RHN RHN
Source : ANI
ಅಮೇಥಿ: ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ವಿರುದ್ಧ ಜಯಭೇರಿ ಬಾರಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಪ್ತನ ಕೊಲೆಗೆ ಸಂಬಂಧಿಸಿ ಇಬ್ಬರು ಶಂಕಿತರನ್ನು   ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಅವರನ್ನು ಶನಿವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿರುವ ಪೋಲೀಸ್ ಇಲಾಖೆ ಹತ್ಯೆಗೆ ಸಂಬಂಧಿಸಿ ಶಂಕಿತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಸುರೇಂದ್ರ ಸಿಂಗ್ ಹತ್ಯೆಗೆ ನೈಜ ಕಾರಣವಿನ್ನೂ ಪತ್ತೆಯಾಗಿಲ್ಲ. ರಾಜಕೀಯ ವೈಷಮ್ಯ ಕೊಲೆಗೆ ಕಾರಣವೆಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಈ ನಡುವೆ ಸಂಸದೆ ಸ್ಮೃತಿ ಇರಾನಿ ತಾವು ಹತ್ಯೆಗೀಡಾದ ಸುರೇಂದ್ರ ಸಿಂಗ್ ಅವರ ಮನೆಗೆ ಧಾವಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp