ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಪ್ರಧಾನಿಗೆ ಮನವಿ ಮಾಡಬಹುದು, ಆಗ್ರಹ ಮಾಡಲು ಬರುವುದಿಲ್ಲ: ಜಗನ್

2.58 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿರುವ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ...

Published: 26th May 2019 12:00 PM  |   Last Updated: 26th May 2019 08:19 AM   |  A+A-


Could only request, not demand PM for special category status to Andhra: Jagan Reddy

ಜಗನ್ ಮೋಹನ್ ರೆಡ್ಡಿ

Posted By : LSB LSB
Source : PTI
ನವದೆಹಲಿ: 2.58 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿರುವ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಪಕ್ಷ ಮನವಿ ಮಾಡಬಹುದು. ಆದರೆ ಇದಕ್ಕಾಗಿ ಯಾವುದೇ ಆಗ್ರಹ ಅಥವಾ ಆದೇಶ ಮಾಡಲು ಬರುವುದಿಲ್ಲ ಎಂದು ಆಂಧ್ರ ಪ್ರದೇಶ ನಿಯೋಜಿತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಭಾನುವಾರ ಹೇಳಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜನಗ್ ಮೋಹನ್ ರೆಡ್ಡಿ ಅವರು ಇಂದು ಪ್ರಧಾನಿ ನೇರಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಿ ಮೋದಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗನ್, ಈಗಲೇ ನಮಗೆ ವಿಶೇಷ ಸ್ಥಾನಮಾನ ಸಿಗದಿರಬಹುದು. ಆದರೆ ಈ ಸಂಬಂಧ ನಾನು ಪ್ರಧಾನಿ ಮೋದಿಗೆ ಪದೇಪದೆ ಮನವಿ ಮಾಡುತ್ತಲೇ ಇರುತ್ತೇನೆ. ಒಂದು ದಿನ ಅವರು ಮನಸು ಬದಲಾಯಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಎನ್ ಡಿಎಗೆ ಕೇವಲ 250 ಸ್ಥಾನಗಳು ಬಂದಿದ್ದರೆ ವೈಎಸ್ ಆರ್ ಕಾಂಗ್ರೆಸ್ ಗೆ ಅದ್ಭುತ ಕ್ಷಣವಾಗಲಿತ್ತು. ಆದರೆ ಈಗ ಅವರಿಗೆ ನಮ್ಮ ಅಗತ್ಯ ಇಲ್ಲ. ಅವರು ಪ್ರಬಲರಾಗಿದ್ದಾರೆ ಎಂದು ಜಗನ್ ಹೇಳಿದ್ದಾರೆ.

175 ಸದಸ್ಯಬಲದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 151 ಸೀಟುಗಳನ್ನು ಮತ್ತು 25 ಲೋಕಸಭಾ ಸ್ಥಾನಗಳ ಪೈಕಿ 22 ಸೀಟುಗಳನ್ನು ಗೆದ್ದುಕೊಂಡ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ಅಥವಾ ವಿಷಯಾಧಾರಿತ ಬೆಂಬಲ ನೀಡುವ ಬಗ್ಗೆ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಭೇಟಿ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಜಗನ್ ಮೋಹನ್ ರೆಡ್ಡಿ ಭೇಟಿಯಾಗಿ ಚರ್ಚಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp