ಚೆನ್ನೈ: ಪೊಲೀಸರು ಬೆನ್ನತ್ತಿದ್ದರಿಂದ 1.5 ಕೋಟಿ ಹಣವನ್ನು ರಸ್ತೆಗೆ ಎಸೆದು ಪರಾರಿಯಾದ ದರೋಡೆಕೋರರು

ಅಣ್ಣಾ ಸಲೈನಲ್ಲಿನ ಸ್ಪೆನ್ಸರ್ಸ್ ಪ್ಲಾಜಾ ಮಾಲ್ ಮಾಲೀಕರ ಮನೆಯಿಂದ ಕಳ್ಳತನ ಮಾಡಿದ್ದ ದರೋಡೆಕೋರರನ್ನು ಪೊಲೀಸರು ಬೆನ್ನತ್ತಿದ್ದರಿಂದ ಸುಮಾರು 1. 56 ಕೋಟಿ ರೂಪಾಯಿಯನ್ನು ರಸ್ತೆ ಮೇಲೆಯೇ ಎಸೆದು ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ

Published: 28th May 2019 12:00 PM  |   Last Updated: 28th May 2019 07:04 AM   |  A+A-


Police with Stolen Money

ಹಣದೊಂದಿಗೆ ಪೊಲೀಸರು

Posted By : ABN ABN
Source : The New Indian Express
ಚೆನ್ನೈ:  ಅಣ್ಣಾ ಸಲೈನಲ್ಲಿನ ಸ್ಪೆನ್ಸರ್ಸ್ ಪ್ಲಾಜಾ ಮಾಲ್ ಮಾಲೀಕರ ಮನೆಯಿಂದ ಕಳ್ಳತನ ಮಾಡಿದ್ದ ದರೋಡೆಕೋರರನ್ನು ಪೊಲೀಸರು ಬೆನ್ನತ್ತಿದ್ದರಿಂದ  ಸುಮಾರು 1. 56 ಕೋಟಿ ರೂಪಾಯಿಯನ್ನು  ರಸ್ತೆ ಮೇಲೆಯೇ  ಎಸೆದು ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ

ಬೆಳಗ್ಗೆ 2.30 ರ ಸುಮಾರಿನಲ್ಲಿ ಬೈಕಿನಲ್ಲಿ ಬಂದಿದ್ದ ಅಪರಿಚಿತ ದರೋಡೆಕೋರರು  ಆ ಪ್ರದೇಶದಲ್ಲಿ ಓಡಾಡುತ್ತಿದುದ್ದನ್ನು ಪೊಲೀಸರು ನೋಡಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗುವಾಗ ಅದೇ  ಸ್ಥಳದಲ್ಲಿ ನಾಲ್ಕು ಬಾರಿ ದರೋಡೆಕೋರರನ್ನು ಗಮನಿಸಿದ್ದರಿಂದ ಶಂಕೆ ಉಂಟಾಗಿ ಅವರನ್ನು ಬೆನ್ನತ್ತಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಬೈಕ್ ಮೇಲೆ ಇಟ್ಟಿದ್ದ ಮೂರು ಬ್ಯಾಗ್ ಗಳ ಪೈಕಿ ಒಂದು ಬೈಕಿನಿಂದ ಕೆಳಗೆ ಬಿದಿದ್ದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಿತರ ಎರಡು ಬ್ಯಾಗ್ ಗಳನ್ನು ರಸ್ತೆಯಲ್ಲಿಯೇ  ಎಸೆದು ದರೋಡೆಕೋರರು ಪರಾರಿಯಾಗಿದ್ದಾರೆ.  ಆ ಬ್ಯಾಗ್ ನಲ್ಲಿ 1 ಕೋಟಿ 56 ಲಕ್ಷ ರೂಪಾಯಿ  ಪತ್ತೆಯಾಗಿದೆ.

ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಉದ್ಯಮಿ ಎಂ. ಬಾಲಸುಬ್ರಮಣ್ಯಂ ಅವರ ಮನೆಯಿಂದ 1.56 ಕೋಟಿ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಸೈದಾಪೆೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬಾಲಸುಬ್ರಮಣ್ಯಂ  ಇತರರ ಪಾಲುದಾರಿಕೆಯಲ್ಲಿ 1987ರಲ್ಲಿ ಸ್ಪೆನ್ಸರ್ಸ್  ಪ್ಲಾಜಾ ಸ್ಥಾಪಿಸಿದ್ದರು. ನಂತರ ಅದರಿಂದ ಅವರು ಹೊರಗಡೆ ಬಂದಿದ್ದರು ಎಂಬುದು ತಿಳಿದುಬಂದಿದೆ.

ಬಾಲಸುಬ್ರಮಣ್ಯಂ  5 ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದ್ದರು. ಅದರಲ್ಲಿ ಉಳಿದದ್ದು ಈ ಹಣವಾಗಿದೆ. ಮನೆ ಕಿಟಕಿ ಮೂಲಕ ಒಳಗಡೆ  ನುಗ್ಗಿ ದರೋಡೆಕೋರರು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp