ಸಂಸತ್ತು ಬಳಿ ಪೋಸ್ ಕೊಟ್ಟು ಟ್ರೋಲ್ ಗೆ ಗುರಿಯಾದ ಟಿಎಂಸಿ ಸಂಸದೆಯರು!

ಪಶ್ಚಿಮ ಬಂಗಾಳದಿಂದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಬೆಂಗಾಳಿ ನಟಿಯರಾದ ಮಿಮಿ ಚಕ್ರಬೊರ್ತಿ ಹಾಗೂ ನುಶ್ರತ್ ಜಹಾನ್ ಮೊದಲ ದಿನ ಸಂಸತ್ ಬಳಿ ತೆಗೆದುಕೊಂಡಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಟ್ವಿಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನೂತನ ಸಂಸದೆಯರು
ನೂತನ ಸಂಸದೆಯರು

ಕೊಲ್ಕತ್ತಾ: ಪಶ್ಚಿಮ ಬಂಗಾಳದಿಂದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಬೆಂಗಾಳಿ ನಟಿಯರಾದ ಮಿಮಿ ಚಕ್ರಬೊರ್ತಿ ಹಾಗೂ ನುಶ್ರತ್ ಜಹಾನ್  ಮೊದಲ ದಿನ ಸಂಸತ್  ಬಳಿ ತೆಗೆದುಕೊಂಡಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಟ್ವಿಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

ಮೊದಲ ದಿನ ಸಂಸತ್ ಸದಸ್ಯರು ಧರಿಸಿರುವ ಬಟ್ಟೆಗೆ ನಾಚಿಕೆಪಡುವಂತಾಗಿದೆ ಎಂದು ಟ್ವಿಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಹಿಂದೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಇವರಿಬ್ಬರ ಹೆಸರು ಘೋಷಣೆಯಾದಾಗಲೂ ಚುನಾವಣೆ ಸ್ಪರ್ಧೆ ಕುರಿತಾಗಿಯೂ ಇವರಿಬ್ಬರೂ ಟ್ರೋಲ್ ಗೆ ಗುರಿಯಾಗಿದ್ದರು.

ಜಾದವ್ ಪುರ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಿಮಿ  ಬಳಿ ಬಣ್ಣದ ಶರ್ಟ್ , ಜೀನ್ಸ್ ಹಾಗೂ ಜೋಡಿ ಸ್ನಿಕರ್ಸ್  ಧರಿಸಿದ್ದು, ಇದು ಸಿನಿಮಾ ಚಿತ್ರೀಕರಣವಲ್ಲ ಎಂದು ಟ್ವಿಟಿಗರು ಟೀಕಿಸಿದ್ದಾರೆ.

ನಾಟಕ ಮಾಡಲು ಅಲ್ಲಿಗೆ ಹೋಗಿದ್ದೀರಾ? ಸಂಸತ್ತಿನಲ್ಲಿ ಈ ಡ್ರಾಮಾ ಮಾಡಬೇಡಿ, ಬಂಗಾಳ ನಾಚಿಕೆಪಡುವಂತಾಗುತ್ತದೆ ಎಂದು ಮತ್ತೋರ್ವ ಬಳಕೆದಾರರು ಕಿಡಿಕಾರಿದ್ದಾರೆ.

ಇದೇ ರೀತಿಯ ಪೋಟೋವನ್ನು ತನ್ನ ಇನ್ಸಾಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಬಸ್ರಿತ್ ಕ್ಷೇತ್ರದ ಸಂಸದೆ ನುಶ್ರತ್ ಜಹಾನ್ ಕೂಡಾ ಇದೇ ರೀತಿಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸಂಸತ್ತು ಪೋಟೋ ಶೂಟ್ ಮಾಡುವ ಸ್ಥಳವಲ್ಲ, ಇದು ದೇಶದ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುವ ಸ್ಥಳ ಎಂದು ಕೆಲವರು ತಿಳಿ ಹೇಳುವ ಕೆಲಸ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com