2 ವಾರಗಳ ಹಿಂದೆ ಮದುವೆ ಮಾಡಿಸಿದ್ದ ಪುರೋಹಿತನ ಜೊತೆ ನವವಧು ಪರಾರಿ!

ಮದುವೆ ಮಾಡಿಸಿದ್ದ ಪುರೋಹಿತನ ಜೊತೆಯೇ ನವ ವಿವಾಹಿತೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ...

Published: 29th May 2019 12:00 PM  |   Last Updated: 29th May 2019 02:17 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : The New Indian Express
ಸಿರೋಂಜ್: ಮದುವೆ ಮಾಡಿಸಿದ್ದ ಪುರೋಹಿತನ ಜೊತೆಯೇ ನವ ವಿವಾಹಿತೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಸಿರೋಂಜ್ ನಲ್ಲಿ ನಡೆದಿದೆ.

ಎರಡು ವಾರಗಳ ಹಿಂದೆ ಅಂದರೇ ಮೇ 7 ರಂದು ಪರಾರಿಯಾದ ನವವಿವಾಹಿತೆಯ ಮದುವೆಯಾಗಿತ್ತು. ಮೇ 23 ರಂದು ಆಕೆ ಪುರೋಹಿತನ ಜೊತೆಯೇ ಓಡಿ ಹೋಗಿದ್ದಾಳೆ. ಮೇ 23 ರಂದು ಆತ ಮತ್ತೊಂದು ಮದುವೆ ಮಾಡಿಸಿದ್ದ, ಅದಾದ ನಂತರ ಅವರಿಬ್ಬರ ಬಗ್ಗೆ ಸುಳಿವಿಲ್ಲ, ಎಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ, 

ವಿವಾಹದ ನಂತರದ ಶಾಸ್ತ್ರಗಳನ್ನು ನಡೆಸುವ ಸಲುವಾಗಿ ತವರು ಮನೆಗೆ ಆಗಮಿಸಿದ್ದ ನವ ವಿವಾಹಿತೆ ಕೂಡ ಮೇ 23 ರಿಂದ ನಾಪತ್ತೆಯಾಗಿದ್ದಾಳೆ,  ಈ ಸಂಬಂಧ ವಧುವಿನ ಮನೆಯವರು ದೂರು ದಾಖಲಿಸಿದ್ದಾರೆ,. ಪುರೋಹಿತನಿಗೆ ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ, ಒಂದೂವರೆ ಲಕ್ಷ ರು ಮೌಲ್ಯದ ಚಿನ್ನಾಭರಣ ಮತ್ತು 30 ಸಾವಿರ ರು ಹಣದ ಜೊತೆ ವಧು ಪರಾರಿಯಾಗಿದ್ದಾಳೆ.
Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp