ಇಷ್ಟಕ್ಕೂ ಏನಿದು ಪೆಗಾಸಸ್ ಸ್ಪೈವೇರ್?
ವಾಟ್ಸಪ್ ಮೂಲಕ ಗೂಢಚರ್ಯೆ ಮಾಡಲು ಕೇಂದ್ರ ಸರ್ಕಾರ ಇಸ್ರೇಲ್ ನೆರವು ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ಪೆಗಾಸಸ್ ಎಂಬ ಸ್ಪೈವೇರ್ ಬಳಕೆ ಮಾಡುತ್ತಿದೆ ಎನ್ನಲಾಗಿದೆ. ಆದರೆ ಇಷ್ಟಕ್ಕೂ ಏನಿದು ಪೆಗಾಸಸ್ ಸ್ಪೈವೇರ್.. ಇದಕ ಕೆಲಸವೇನು..? ಇಲ್ಲಿದೆ ಮಾಹಿತಿ..
Published: 02nd November 2019 09:26 AM | Last Updated: 02nd November 2019 09:26 AM | A+A A-

ಸಂಗ್ರಹ ಚಿತ್ರ
ನವದೆಹಲಿ: ವಾಟ್ಸಪ್ ಮೂಲಕ ಗೂಢಚರ್ಯೆ ಮಾಡಲು ಕೇಂದ್ರ ಸರ್ಕಾರ ಇಸ್ರೇಲ್ ನೆರವು ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ಪೆಗಾಸಸ್ ಎಂಬ ಸ್ಪೈವೇರ್ ಬಳಕೆ ಮಾಡುತ್ತಿದೆ ಎನ್ನಲಾಗಿದೆ. ಆದರೆ ಇಷ್ಟಕ್ಕೂ ಏನಿದು ಪೆಗಾಸಸ್ ಸ್ಪೈವೇರ್.. ಇದಕ ಕೆಲಸವೇನು..? ಇಲ್ಲಿದೆ ಮಾಹಿತಿ..
ಪೆಗಾಸಸ್ ಎಂಬುದು ಸ್ಪೈವೇರ್ ಆಗಿದ್ದು, ಎನ್ಎಸ್ಓ ಗ್ರೂಪ್ ಇದನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಇದೇ ಸ್ಪೈವೇರ್ ಅನ್ನು ಬಳಕೆ ಮಾಡಿಕೊಂಡು ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸಲಾಗುತ್ತಿದೆ ಎನ್ನಲಾಗಿದೆ.
Pegasus ಎಂಬ ಸ್ಪೈವೇರ್ ಗ್ರಾಹಕನಿಗೆ ಗೊತ್ತಿಲ್ಲದೆ ತಮ್ಮ ಸ್ಮಾರ್ಟ್ ಫೋನುಗಳಲ್ಲಿ ಇನ್ ಸ್ಟಾಲ್ ಆಗುತ್ತದೆ. ಆದ ನಂತರ ಗೂಢಚರ್ಯೆ ನಡೆಸುವ ಸಂಸ್ಥೆಯು ಆ ಮೊಬೈಲ್ ಫೋನಿನಲ್ಲಿ ಇರುವ ಪಾಸ್ ವರ್ಡ್, ಕಾಂಟಾಕ್ಟ್, ಕ್ಯಾಲೆಂಡರ್ ಇವೆಂಟ್, ಟೆಕ್ಸ್ಟ್ ಸಂದೇಶ ಇತ್ಯಾದಿ ಎಲ್ಲ ಖಾಸಗಿ ಮಾಹಿತಿ ಪಡೆಯುತ್ತದೆ. ಮಾತ್ರವಲ್ಲದೆ, ಮೊಬೈಲಿನ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸಿ ಇನ್ನಿತರ ಮಾಹಿತಿಯನ್ನು ಕೂಡ ಸಂಗ್ರಹಿಸಬಹುದಾಗಿದೆ. ಒಂದು ಆಕರ್ಷಕವಾದ ಟೆಕ್ಸ್ಟ್ ಸಂದೇಶದ ಮೂಲಕ ಈ ಸ್ಪೈ ವೇರ್ ಅನ್ನು ಮೊಬೈಲ್ ಗೆ ಕಳುಹಿಸಲಾಗುತ್ತದೆ. ಸಂದೇಶವನ್ನು ಓಪನ್ ಮಾಡಿದಾಗ ಈ ಸ್ಪೈವೇರ್ ಮೊಬೈಲಿನಲ್ಲಿ ಸೇರಿಕೊಂಡು ಇನ್ ಸ್ಟಾಲ್ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯಾವೆಲ್ಲಾ ದೇಶಗಳಿಂದ ಬಳಕೆ
ಇನ್ನು ಜಗತ್ತಿನ ಹಲವು ದೇಶಗಳು ಈ ಪೆಗಾಸಸ್ ಸ್ಪೈವೇರ್ ಬಳಕೆ ಮಾಡುತ್ತಿದ್ದು, ಈ ಪೈಕಿ ವಿಶ್ವದಲ್ಲೇ ಮೆಕ್ಸಿಕೊ ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ವ್ಯವಸ್ಥೆ ಈ ಇಸ್ರೇಲಿ ಸೈಬರ್ ಗೂಢಚರ್ಯೆ ಕೃತ್ಯ ನಡೆದಿತ್ತು. ಅಲ್ಲಿನ ಸರ್ಕಾರ 2016-17ರಿಂದ ಅಂದಾಜು 220 ಕೋಟಿ ರೂಪಾಯಿ ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್ ಗಳನ್ನು ಗೂಢಚರ್ಯೆ ನಡೆಸಿತ್ತು ಎನ್ನಲಾಗಿದೆ.